ರಿಯಲ್ ಸ್ಟಾರ್ ಉಪೇಂದ್ರ ನಾಯಕನಾಗಿ ನಟಿಸಿರುವ `ಬುದ್ಧಿವಂತ 2' ಚಿತ್ರವನ್ನು ಎಂ ಜಯರಾಮ್ ನಿರ್ದೇಶನ ಮಾಡಿದ್ದಾರೆ. ಅಯೋಗ್ಯ, ಚಮಕ್ ಚಿತ್ರಗಳ ಖ್ಯಾತಿಯ ನಿರ್ಮಾಪಕ ಟಿ.ಆರ್. ಚಂದ್ರಶೇಖರ್ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಶ್ರೀನಗರ ಕಿಟ್ಟಿ ಚಿತ್ರದಲ್ಲಿ ಖಳನಾಯಕನಾಗಿ ಘರ್ಜಿಸಿದ್ದಾರೆ. ಉಪ್ಪಿಗೆ ನಾಯಕಿಯರಾಗಿ ಮೇಘನಾ ರಾಜ್ ಮತ್ತು ಸೋನಲ್ ಮಾಂಟೆರಿಯೋ ಕಾಣಿಸಿಕೊಂಡಿದ್ದಾರೆ. ಚಿತ್ರಕ್ಕೆ ಗುರುಕಿರಣ್ ಸಂಗೀತ ನೀಡುತ್ತಿದ್ದಾರೆ.
ಮೂಹೂರ್ತ: 2019, ಮೇ 24 ರಂದು ಬೆಂಗಳೂರಿನ ಶ್ರೀ ಧರ್ಮಗಿರಿ ಮಂಜುನಾಥ ಸ್ವಾಮಿ ದೇವಾಲಯಲದಲ್ಲಿ ಚಿತ್ರದ ಮೂಹೂರ್ತ ನೇರವೇರಿತು.