ಕಿರಣ್ ರಾಜ್ ಮತ್ತು ಸಿರಿ ಪ್ರಹ್ಲಾದ ಮುಖ್ಯ ಪಾತ್ರಗಳಲ್ಲಿ ನಟಿಸಿರುವ 'ಬಡ್ಡೀಸ್' ಚಿತ್ರವನ್ನು ಗುರುತೇಜ್ ನಿರ್ದೇಶಿಸಿದ್ದಾರೆ. ಚಿತ್ರಕ್ಕೆ ಕೆ.ಎಂ.ಪ್ರಕಾಶ್ ಸಂಕಲನ ನೀಡಿದ್ದರೆ, ಜುಡಾ ಸ್ಯಾಂಡಿ ಸಂಗೀತ ನೀಡಿದ್ದಾರೆ. ಚಿತ್ರಕ್ಕೆ ಭಾರತಿ ಶೆಟ್ಟಿ ಬಂಡವಾಳ ಹೂಡಿದ್ದಾರೆ.
ಕಥೆ
ಚಿತ್ರದ ನಾಯಕ ಅಮಿತ್ ಚಿಕ್ಕಂದಿನಲ್ಲಿಯೇ ತಾಯಿಯನ್ನು ಕಳೆದುಕೊಂಡಿರುತ್ತಾನೆ. ಮಗನಿಗೆ ಒಂಟಿತನ ಕಾಡಿದಾಗ, ಅಮಿತ್ ತಂದೆ ಅನಾಥಾಶ್ರಮದ ನಾಲ್ಕು ಹುಡುಗರನ್ನು ಮನೆಗೆ ಕರೆತರುತ್ತಾರೆ. ಹೀಗೆ ನಾಯಕನ ಒಂಟಿತನ ದೂರವಾಗುತ್ತದೆ, ಕಾಲೇಜು ಮೆಟ್ಟಿಲು ಹತ್ತಿದಾಗ ಬಾಲ್ಯದ ಗೆಳತಿ ಸಿಕ್ಕು ಪ್ರೇಮ ಕಥೆ ಆರಂಭವಾಗುತ್ತದೆ. ಹಾಗೇ ಕಾಲೇಜಿನಲ್ಲಿ ಒಂದಿಷ್ಟು ರಾಜಕೀಯ ನಡೆಯುತ್ತದೆ.
ಅಮಿತ್ ವಿದೇಶಕ್ಕೆ ಹೊರಟು ನಿಂತಾಗ, ಅನಾಥರಾಗಿ ಅಮಿತ್ ಬಾಳಲ್ಲಿ ಬಂದ ಸ್ನೇಹಿತರು ತಳಮಳಿಸುತ್ತಾರೆ. ಅಮಿತ್ ನನ್ನು ವಿದೇಶಕ್ಕೆ ಹೊರಡದಂತೆ ಮಾಡಲು ಸಂಚೊಂದನ್ನು ರೂಪಿಸುತ್ತಾರೆ. ಈ ಸಂಚಿಗೆ ನಾಯಕ ಸಿಲುಕಿ ಹಾಕಿಕೊಳ್ಳುತಾನಾ, ಸಿಲುಕಿಕೊಂಡರೆ ಹೇಗೆ ಪಾರಾಗುತ್ತಾನೆ ಎಂಬುದು ಚಿತ್ರದ ಕಥೆ.
ರಿಲೀಸ್
ಈ ಚಿತ್ರ ಜೂನ್ 24ರಂದು ಚಿತ್ರಮಂದಿರಗಳಲ್ಲಿ ತೆರೆಕಂಡಿತು.