ಸಚಿನ್ ಧನಪಾಲ್ ಮತ್ತು ಆದಿತಿ ಪ್ರಭುದೇವ ಮುಖ್ಯ ಪಾತ್ರದಲ್ಲಿ ನಟಿಸುತ್ತಿರುವ ಚಿತ್ರ ಚಾಂಪಿಯನ್. ಶಾಹುರಾಜ್ ಶಿಂಧೆ ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ. ಆದರೆ, ದುರಾದದೃಷ್ಟವಶಾತ್ ಅವರು ನಿಧನರಾಗಿದ್ದಾರೆ. ಅಕ್ಟೋಬರ್ 14ರಂದು ಈ ಸಿನಿಮಾವು ರಾಜ್ಯಾದ್ಯಂತ ತೆರೆಗೆ ಬರಲಿದೆ. ಸಿನಿಮಾದ ವಿಶೇಷವಾದ ಹಾಡಿಗೆಹೆಜ್ಜೆ ಹಾಕುವ ಮೂಲಕ ಬಾಲಿವುಡ್ ನಟಿ ಸನ್ನಿಲಿಯೋನ್ ಕನ್ನಡಕ್ಕೆ ಮತ್ತೆ ವಾಪಸಾಗಿದ್ದಾರೆ. ಚಾಂಪಿಯನ್‌ನಲ್ಲಿ ಹಿರಿಯ ನಟರಾದ ದೇವರಾಜ್, ರಂಗಾಯಣ ರಘು, ಸುಮನ್ ತಲ್ವಾರ್, ಶೋಭರಾಜ್, ಚಿಕ್ಕಣ್ಣ, ಗಿರೀಶ್ ಶಿವಣ್ಣ, ಪ್ರಶಾಂತ್ ಸಿದ್ಧಿ ಮತ್ತು ಗೋವಿಂದೇಗೌಡ ಇದ್ದಾರೆ.