ಚೆಫ್ ಚಿದಂಬರ ಸಿನಿಮಾವನ್ನು ಎಂ ಆನಂದರಾಜ್ ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾದಲ್ಲಿ ಜೊತೆ ಜೊತೆಯಲಿ ಸೀರಿಯಲ್ ಖ್ಯಾತಿಯ ಅನಿರುದ್ಧ್ ಜಟ್ಕರ್ ನಾಯಕನಾಗಿ ನಟಿಸಿದ್ದಾರೆ. ನಾಯಕಿಯರಾಗಿ ನಿಧಿ ಸುಬ್ಬಯ್ಯ ಹಾಗೂ ರೆಚೆಲ್ ಡೇವಿಡ್ ಕಾಣಿಸಿಕೊಂಡಿದ್ದು, ಉಳಿದಂತೆ ಶರತ್ ಲೋಹಿತಾಶ್ವ, ಕೆ.ಎಸ್.ಶ್ರೀಧರ್, ಶಿವಮಣಿ ಮುಂತಾದವರು ತಾರಾಗಣದಲ್ಲಿದ್ದಾರೆ. ರೂಪ ಡಿ.ಎನ್ ಅವರು ದಮ್ತಿ ಪಿಕ್ಚರ್ಸ್ ಲಾಂಛನದಲ್ಲಿ ಈ ಸಿನಿಮಾವನ್ನು ನಿರ್ಮಿಸಿದ್ದಾರೆ. ಉದಯಲೀಲಾ ಛಾಯಾಗ್ರಹಣ, ರಿತ್ವಿಕ್ ಮುರಳೀಧರ್ ಸಂಗೀತ ಚಿತ್ರಕ್ಕಿದೆ.
ಚೆಫ್ ಚಿದಂಬರ ಚಿತ್ರದ ಕಥೆಯು ಅಪರಾಧ, ಕೊಲೆ ಮತ್ತು ನಿಗೂಢತೆಯ ಅಂಶಗಳನ್ನು ಒಳಗೊಂಡಿದೆ. ನಾಯಕನ ಆಂತರಿಕ ಸಂಘರ್ಷ, ಆತ ಅದರಲ್ಲಿ ಸಿಲುಕಿಕೊಳ್ಳುವುದು ಮತ್ತು ಆತ ಸಂಕಟದಿಂದ ಹೊರಬರಲು ಮಾಡುವ ತಂತ್ರಗಳ ಸುತ್ತ ಕಥೆ ಸುತ್ತುತ್ತದೆ.
ಬಿಡುಗಡೆ: ಚೆಫ್ ಚಿದಂಬರ ಸಿನಿಮಾ 2024ರ ಜೂನ್ 14ರಂದು ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಯಿತು.