ಚಂದನ್ ಆಚಾರ್, ಸಂಜನಾ ಆನಂದ್,ತಬಲಾ ನಾನಿ,ಅಪೂರ್ವ ಪ್ರಮುಖ ಪಾತ್ರದಲ್ಲಿ ನಟಿಸುತ್ತಿರುವ `ಕೆಮಿಸ್ಟ್ರಿ ಆಫ್ ಕರಿಯಪ್ಪ' ಚಿತ್ರವನ್ನು ಕುಮಾರ್ ನಿರ್ದೆಶಿಸಿದ್ದಾರೆ.ಇದೊಂದು ಹಾಸ್ಯಪ್ರಧಾನ ಮನೋರಂಜಾತ್ಮಕ ಚಿತ್ರವಾಗಿದ್ದು ಡಾ. ಮಂಜುನಾಥ್ ಡಿ.ಎಸ್ ನಿರ್ಮಿಸಿದ್ದಾರೆ. ಚಿತ್ರದ ಅಡಿಯೋ ಹಕ್ಕು ಆನಂದ್ ಆಡಿಯೋ ಸಂಸ್ಥೆ ಪಾಲಾಗಿದೆ.
ಆರಾಮಾಗಿದ್ದ ಒಂದು ಮಧ್ಯಮ ವರ್ಗದ ಕುಟುಂಬದಲ್ಲಿ ದಾಂಪತ್ಯ ಲೈಂಗಿಕ ವೈಪಲ್ಯದಿಂದ ಉದ್ಭವಿಸುವ ಸಮಸ್ಯೆಗಳನ್ನು ಮನೋರಂಜನಾತ್ಮಕವಾಗಿ ಚಿತ್ರಿಸಲಾಗಿದೆ. ತಂದೆ ಮಗನ ಬೆನ್ನಿಗೆ ನಿಂತು ಪ್ರೋತ್ರಾಹಿಸುವ ಪರಿಯನ್ನು ಕೂಡ ನಿರ್ದೇಶಕರು ಹಾಸ್ಯಾತ್ಮಕವಾಗಿ ಕಟ್ಟಿಕೊಟ್ಟಿದ್ದಾರೆ.