ಕಥೆ- ಚಿತ್ರದ ಹೆಸರೇ ಹೇಳುವಂತೆ ಚಿತ್ರದಲ್ಲಿ ಕಥಾನಾಯಕ ರಾಣಾ ಸಿನಿಮಾ ಕಥೆ (ಸ್ಕ್ರಿಪ್ಟ್) ಬರೆಯುತ್ತಿರುತ್ತಾನೆ. ತಾನು ಪ್ರೀತಿಸಿದ ಹುಡುಗಿಗಿಂತ ಸಿನಿಮಾನೇ ಹೆಚ್ಚು ಎಂದು ಪ್ರೀತಿಸಿದ ಹುಡುಗಿಯನ್ನು ದೂರ ಮಾಡಿಕೊಳ್ಳುತ್ತಾನೆ. ತನ್ನ ಚಿತ್ರದ ಕತೆಯನ್ನು ಹಿಡಿದು ಬೀದಿ ಬೀದಿ ಅಲೆಯುತ್ತಾನೆ. ಆದರೆ ಯಾರು ಇವನ ಕಥೆಯನ್ನು ಸ್ವೀಕರಿಸುವುದಿಲ್ಲ. ಇದರಿಂದ ಮಾನಸಿಕವಾಗಿ ಕುಗ್ಗಿ ಹೋಗುವ ಇವನನ್ನು ಸ್ನೇಹಿತರು ಪ್ರವಾಸಕ್ಕೆ ಕರೆದೊಯ್ಯುತ್ತಾರೆ. ಇಲ್ಲಿಂದ ಚಿತ್ರಕ್ಕೆ ಇನ್ನೊಂದು ತಿರುವು ಮೂಡುತ್ತದೆ.
ತಾನು ಆಯ್ಕೆ ಮಾಡಿಕೊಂಡ ಕ್ಷೇತ್ರದಲ್ಲಿನ ಸೋಲಿನಿಂದ ಪ್ರವಾಸಕ್ಕೆ ಹೋದ ರಾಣಾನಿಗೆ ಒಬ್ಬ ಅಘೋರಿ ಕಾಟ ಕೊಡಲು ಆರಂಭಿಸುತ್ತಾನೆ. ಈ ಕಾಟದಿಂದ ಬೇಸತ್ತು ಹುಚ್ಚನ ರೀತಿ ಆಗುವ ರಾಣಾ ಮತ್ತು ಭಯದಿಂದ ತತ್ತರಿಸುವ ಅವನ ಸ್ನೇಹಿತರು ಹೀಗೆ ಚಿತ್ರದ ಕಥೆ ಸಾಗುತ್ತದೆ. ಅಷ್ಟಕ್ಕೂ ಈ ಅಘೋರಿ ಯಾರು?ಅವನೇಕೆ ರಾಣಾನ ಹಿಂದೆ ಬಿದ್ದಿದ್ದಾನೆ ಎನ್ನುವುದೇ ಚಿತ್ರದ ಸಸ್ಪೆನ್ಸ್.