X
ಕನ್ನಡ » ಚಲಚಿತ್ರಗಳು » ಚಿತ್ರಕಥಾ
ಚಿತ್ರಕಥಾ

ಚಿತ್ರಕಥಾ

Thriller | 12 Jul 2019 | U/A | 116 Mins
Kannada

2.5 /5 Users

3 /5 Filmibeat

ಚಿತ್ರಕಥಾ ಕಥೆ

ಹಿನ್ನಲೆ - ಯುವ ನಿರ್ದೇಶಕ ಯಶಸ್ವಿ ಬಾಲಾದಿತ್ಯ ನಿರ್ದೇಶನದ ಥ್ರಿಲ್ಲರ್ `ಚಿತ್ರಕಥಾ' ಚಿತ್ರದಲ್ಲಿ ಸುಧಾರಾಣಿ, ಸುಜಿತ್ ರಾಠೋಡ್, ದಿಲೀಪ್ ರಾಜ್,ಬಿ.ಜಯಶ್ರೀ ಮತ್ತು ಅನುಷಾ ರಾವ್ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. ಪ್ರಜ್ವಲ್ ಎಂ ರಾಜಾ ಚಿತ್ರಕ್ಕೆ ಬಂಡವಾಳ ಹೂಡಲಿದ್ದಾರೆ.ಚೇತನಕುಮಾರ್ ಚಿತ್ರಕ್ಕೆ ಸಂಗೀತ ನೀಡುತ್ತಿದ್ದಾರೆ. ಚಿತ್ರದ ಮೊದಲ ಲುಕ್ 2019, ಜೂನ್ 1 ರಂದು ಬಿಡುಗಡೆಯಾಯಿತು.ಚಿತ್ರದ ಟ್ರೇಲರ್ ನ್ನು ರೋರಿಂಗ್ ಸ್ಟಾರ್ ಶ್ರೀಮುರಳಿ ಜೂನ್ 10,2019 ರಂದು ಡಿ ಬೀಟ್ಸ್ ಯ್ಯೂಟ್ಯೂಬ್ ಚಾನೆಲ್‌ನಲ್ಲಿ ಬಿಡುಗಡೆ ಮಾಡಿದರು. ಕಥೆ - ಚಿತ್ರದ ಹೆಸರೇ ಹೇಳುವಂತೆ ಚಿತ್ರದಲ್ಲಿ ಕಥಾನಾಯಕ ರಾಣಾ ಸಿನಿಮಾ ಕಥೆ (ಸ್ಕ್ರಿಪ್ಟ್) ಬರೆಯುತ್ತಿರುತ್ತಾನೆ. ತಾನು ಪ್ರೀತಿಸಿದ ಹುಡುಗಿಗಿಂತ ಸಿನಿಮಾನೇ ಹೆಚ್ಚು ಎಂದು ಪ್ರೀತಿಸಿದ ಹುಡುಗಿಯನ್ನು ದೂರ ಮಾಡಿಕೊಳ್ಳುತ್ತಾನೆ. ತನ್ನ ಚಿತ್ರದ ಕತೆಯನ್ನು ಹಿಡಿದು ಬೀದಿ ಬೀದಿ ಅಲೆಯುತ್ತಾನೆ. ಆದರೆ ಯಾರು ಇವನ ಕಥೆಯನ್ನು ಸ್ವೀಕರಿಸುವುದಿಲ್ಲ. ಇದರಿಂದ ಮಾನಸಿಕವಾಗಿ ಕುಗ್ಗಿ ಹೋಗುವ ಇವನನ್ನು ಸ್ನೇಹಿತರು ಪ್ರವಾಸಕ್ಕೆ ಕರೆದೊಯ್ಯುತ್ತಾರೆ. ಇಲ್ಲಿಂದ ಚಿತ್ರಕ್ಕೆ ಇನ್ನೊಂದು ತಿರುವು ಮೂಡುತ್ತದೆ. ತಾನು ಆಯ್ಕೆ ಮಾಡಿಕೊಂಡ ಕ್ಷೇತ್ರದಲ್ಲಿನ ಸೋಲಿನಿಂದ ಪ್ರವಾಸಕ್ಕೆ ಹೋದ ರಾಣಾನಿಗೆ ಒಬ್ಬ ಅಘೋರಿ ಕಾಟ ಕೊಡಲು ಆರಂಭಿಸುತ್ತಾನೆ. ಈ ಕಾಟದಿಂದ ಬೇಸತ್ತು ಹುಚ್ಚನ ರೀತಿ ಆಗುವ ರಾಣಾ ಮತ್ತು ಭಯದಿಂದ ತತ್ತರಿಸುವ ಅವನ ಸ್ನೇಹಿತರು ಹೀಗೆ ಚಿತ್ರದ ಕಥೆ ಸಾಗುತ್ತದೆ. ಅಷ್ಟಕ್ಕೂ ಈ ಅಘೋರಿ ಯಾರು?ಅವನೇಕೆ ರಾಣಾನ ಹಿಂದೆ ಬಿದ್ದಿದ್ದಾನೆ ಎನ್ನುವುದೇ ಚಿತ್ರದ ಸಸ್ಪೆನ್ಸ್.
Read More

ಚಿತ್ರಕಥಾ ಕಲಾವಿದರು ಮತ್ತು ಸಿಬ್ಬಂದಿ

ಚಿತ್ರಕಥಾ ಕ್ರೂ ಮಾಹಿತಿ

ನಿರ್ದೇಶಕ ಯಶಸ್ವಿ ಬಾಲಾದಿತ್ಯ
ಸಿನಿಮಾಟೋಗ್ರಫಿ NA
ಸಂಪಾದಕ NA
ಸಂಗೀತ ಚೇತನ್ ಕುಮಾರ್ ಶಾಸ್ತ್ರೀ
ನಿರ್ಮಾಪಕ ಪ್ರಜ್ವಲ್ ಎಂ ರಾಜಾ
ಬಜೆಟ್ TBA
ಬಾಕ್ಸ್ ಆಫೀಸ್ TBA
ಒಟಿಟಿ ಪ್ಲಾಟ್ ಫಾರ್ಮ್ TBA
ಒಟಿಟಿ ರಿಲೀಸ್ ದಿನಾಂಕ TBA

ಚಿತ್ರಕಥಾ ವಿಮರ್ಶಕರ ವಿಮರ್ಶೆ

kannada.filmibeat.com
ಐದು ಗೆಳೆಯರು ಪ್ರವಾಸ ಹೋಗುತ್ತಾರೆ. ಆ ಪ್ರವಾಸದಲ್ಲಿ ಭಯಾನಕ ಘಟನೆಗಳು ನಡೆಯುತ್ತವೆ. ಆ ಘಟನೆಗಳ ಹಿಂದಿನ ಚಿತ್ರಕಥೆಯೇ 'ಚಿತ್ರಕಥಾ' ಸಿನಿಮಾ. ಕಥೆಯ ಒನ್ ಲೈನ್ ಕೇಳಿದರೆ, ಈ ರೀತಿಯ ಸಿನಿಮಾ ಈಗಾಗಲೇ ಬಹಳ ಬಂದಿವೆ ಎನಿಸಿದರೂ, ಇದು ಕೊಂಚ ಬೇರೆ ರೀತಿ ಇದೆ. ಥ್ರಿಲ್ಲರ್ ಜಾನರ್ ನಲ್ಲಿ ಬಂದಿರುವ ಈ ಸಿನಿಮಾ ನೋಡಲು ಬೇಸರ ಆಗಲ್ಲ. ಹೊಸಬರ ಈ ಪ್ರಯತ್ನ ಚೆನ್ನಾಗಿದೆ. ಸಿನಿಮಾದ ಕೆಲವು ಅಂಶಗಳು ಇಷ್ಟ ಆದ್ರೆ, ಇನ್ನು ಕೆಲವು ಅಂಶಗಳು ಇನ್ನಷ್ಟು ಚೆನ್ನಾಗಿ ಮಾಡಬೇಕಿತ್ತು ಎಂಬ ಭಾವ ಮೂಡಿಸುತ್ತದೆ. ಕಥೆ, ಅದಕ್ಕೆ ಬೆರೆತ ಹಾಸ್ಯ, ಸೆಕೆಂಡ್ ಹಾಫ್ ಟ್ವಿಸ್ಟ್, ಅಘೋರಿ ಪಾತ್ರ ಎಲ್ಲವೂ ಚಿತ್ರದ ಹೈಲೈಟ್ ಆಗಿದೆ. ಆದರೆ, ಈ ಥ್ರಿಲ್ಲರ್ ಸಿನಿಮಾಗೆ ಇನ್ನಷ್ಟು ಟ್ವಿಸ್ಟ್ ಟರ್ನ್, ಚುರುಕಾದ ಚಿತ್ರಕಥೆಯ ಅಗತ್ಯ ಇತ್ತು. ಸಿನಿಮಾದ ಕೆಲ ದೃಶ್ಯಗಳಿಗೆ ಕಡಿವಾಣ ಹಾಕಬಹುದಿತ್ತು.'ಚಿತ್ರಕಥಾ' ಚಿತ್ರವನ್ನು ಕಥೆಯ ಕಾರಣಕ್ಕೆ ಎಲ್ಲರೂ ನೋಡಬಹುದು. ಬೇರೆ ರೀತಿಯ ಪ್ರಯತ್ನ ಇಲ್ಲಿ ಕಾಣುತ್ತದೆ. ಹೊಸಬರು ಸೇರಿ ಒಂದು ಒಳ್ಳೆಯ ಸಿನಿಮಾ ಮಾಡಿದ್ದಾರೆ. ಫ್ಯಾಮಿಲಿ ಸಮೇತ ಆರಾಮಾಗಿ ಚಿತ್ರಮಂದಿರದಲ್ಲಿ ಕೂರಬಹುದು. ಥ್ರಿಲ್ಲರ್ ಸಿನಿಮಾ ಇಷ್ಟ ಪಡುವವರು ಮಿಸ್ ಮಾಡಬೇಡಿ.

ಚಿತ್ರಕಥಾ ಸಿನಿಮಾ ನೋಡುಗರ ವಿಮರ್ಶೆ

  • ಕಥೆ
  • ಕ್ರಿಯೆ
  • ದಿಕ್ಕು
  • ಚಿತ್ರ ರೇಟಿಂಗ್

×
2.5 /5 Your Rating

ಚಿತ್ರಕಥಾ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+