ತಮಿಳು ಚಿತ್ರರಂಗದ ಖ್ಯಾತ ನಟ ಚಿಯಾನ್ ವಿಕ್ರಮ್ ಅಭಿನಯದ ಪ್ಯಾನ್ ಇಂಡಿಯಾ ಸಿನಿಮಾ ಕೋಬ್ರಾ. ಈ ಸಿನಿಮಾದ ನಾಯಕಿಯಾಗಿ ಕನ್ನಡದ ನಟಿ ಶ್ರೀನಿಧಿ ಶೆಟ್ಟಿ ಬಣ್ಣ ಹಚ್ಚಿದ್ದಾರೆ. ಶ್ರೀನಿಧಿ ಶೆಟ್ಟಿಯವರ ಎರಡನೇ ಚಿತ್ರ ಇದಾಗಿದೆ. ನಟಿ ಶ್ರೀನಿಧಿ ಶೆಟ್ಟಿ ಅಭಿನಯದ 'ಕೆಜಿಎಫ್: ಚಾಪ್ಟರ್ 1' ಹಾಗೂ 'ಕೆಜಿಎಫ್: ಚಾಪ್ಟರ್ 2' ಸಿನಿಮಾಗಳು ತೆರೆಕಂಡಿವೆ. ಇವೆರಡೂ ಸಿನಿಮಾಗಳಿಂದ ಶ್ರೀನಿಧಿ ಶೆಟ್ಟಿಗೆ ಇನ್ನಿಲ್ಲದಷ್ಟು ಜನಪ್ರಿಯತೆ ಸಿಕ್ಕಿದೆ. ಶ್ರೀನಿಧಿ ಬರೋಬ್ಬರಿ 6-7 ವರ್ಷ ಸಮಯವನ್ನು ಬರೀ 'ಕೆಜಿಎಫ್'ಗೆ ಮೀಸಲಿಟ್ಟಿದ್ದರು. ಅದರ ಮಧ್ಯೆ ಅವರು ಒಪ್ಪಿಕೊಂಡಿದ್ದು ತಮಿಳಿನ 'ಕೋಬ್ರಾ' ಸಿನಿಮಾವನ್ನು ಮಾತ್ರ. ಈ ಸಿನಿಮಾದಲ್ಲಿ ಕ್ರಿಕೆಟಿಗ ಇರ್ಫಾನ್ ಪಠಾಣ್ ಮುಖ್ಯಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಇದು ಅವರ ಮೊದಲ ಚಿತ್ರವೂ ಹೌದು.
ಕಥೆ: ಸಿನಿಮಾದಲ್ಲಿ ಮಧಿ (ವಿಕ್ರಂ) ಒಬ್ಬ ಗಣಿತ ಶಿಕ್ಷಕ ಕಮ್ ಮಾಫಿಕಾ ಕಿಲ್ಲರ್, ಅವನು ತನ್ನ ಆದಾಯವನ್ನು ಅನಾಥಾಶ್ರಮಗಳು ಮತ್ತು ಚಾರಿಟಿ ಹೋಮ್‌ಗಳಗೆ ನೀಡುತ್ತಿರುತ್ತಾನೆ. ಅವನಿಗೆ ಆಘಾತಕಾರಿ ಬಾಲ್ಯದ ನೆನಪಿದೆ ಅದರಿಂದಾಗಿ ಮಾನಸಿಕ ಸಮಸ್ಯೆಯೊಂದು ಆತನನ್ನು ಕಾಡುತ್ತಿದೆ. ಕತೆಯಲ್ಲಿ, ಶ್ರೀನಿಧಿ ಶೆಟ್ಟಿ ನಟಿಸಿರುವ ಭಾವನಾ ಪಾತ್ರ ತನ್ನೆಡೆ ತೋರಿದ ಪ್ರೀತಿ, ಆಸಕ್ತಿಯನ್ನು ಒಪ್ಪಿಕೊಳ್ಳಬೇಕೋ ಅಥವಾ ತಿರಸ್ಕರಿಸಬೇಕೋ ಎಂಬ ಸಂದಿಗ್ಧತೆಯೊಂದಿಗೆ ಹೋರಾಡುತ್ತಿರುವಾಗಲೇ, ಮಾಧಿ, ತನ್ನನ್ನು ಹುಡುಕಿ ಬರುತ್ತಿರುವ ಇಂಟರ್‌ಪೋಲ್ ಅಧಿಕಾರಿಯೊಬ್ಬನು ನಿಭಾಯಿಸಬೇಕಾಗಿದೆ. ಈ ಮಧ್ಯೆ, ಮಾಧಿಯ ಬುದ್ಧಿವಂತಿಕೆಯಿಂದ ಲಾಭ ಪಡೆದುಕೊಳ್ಳುತ್ತಿರುವ ವ್ಯಕ್ತಿ ತನ್ನನ್ನು ಉಳಿಸಿಕೊಳ್ಳಲು ಮಾಧಿಯನ್ನು ಬಲಿಪಶು ಮಾಡುತ್ತಾನೆ.