X
ಕೋಬ್ರಾ

ಕೋಬ್ರಾ

Action | 31 Aug 2022 | U/A | 183 Mins
Kannada

2.5 /5 Users

2.5 /5 Filmibeat

ಕೋಬ್ರಾ ಕಥೆ

ತಮಿಳು ಚಿತ್ರರಂಗದ ಖ್ಯಾತ ನಟ ಚಿಯಾನ್ ವಿಕ್ರಮ್ ಅಭಿನಯದ ಪ್ಯಾನ್ ಇಂಡಿಯಾ ಸಿನಿಮಾ ಕೋಬ್ರಾ. ಈ ಸಿನಿಮಾದ ನಾಯಕಿಯಾಗಿ ಕನ್ನಡದ ನಟಿ ಶ್ರೀನಿಧಿ ಶೆಟ್ಟಿ ಬಣ್ಣ ಹಚ್ಚಿದ್ದಾರೆ. ಶ್ರೀನಿಧಿ ಶೆಟ್ಟಿಯವರ ಎರಡನೇ ಚಿತ್ರ ಇದಾಗಿದೆ. ನಟಿ ಶ್ರೀನಿಧಿ ಶೆಟ್ಟಿ ಅಭಿನಯದ 'ಕೆಜಿಎಫ್: ಚಾಪ್ಟರ್ 1' ಹಾಗೂ 'ಕೆಜಿಎಫ್: ಚಾಪ್ಟರ್ 2' ಸಿನಿಮಾಗಳು ತೆರೆಕಂಡಿವೆ. ಇವೆರಡೂ ಸಿನಿಮಾಗಳಿಂದ ಶ್ರೀನಿಧಿ ಶೆಟ್ಟಿಗೆ ಇನ್ನಿಲ್ಲದಷ್ಟು ಜನಪ್ರಿಯತೆ ಸಿಕ್ಕಿದೆ. ಶ್ರೀನಿಧಿ ಬರೋಬ್ಬರಿ 6-7 ವರ್ಷ ಸಮಯವನ್ನು ಬರೀ 'ಕೆಜಿಎಫ್‌'ಗೆ ಮೀಸಲಿಟ್ಟಿದ್ದರು.  ಅದರ ಮಧ್ಯೆ ಅವರು ಒಪ್ಪಿಕೊಂಡಿದ್ದು ತಮಿಳಿನ 'ಕೋಬ್ರಾ' ಸಿನಿಮಾವನ್ನು ಮಾತ್ರ. ಈ ಸಿನಿಮಾದಲ್ಲಿ ಕ್ರಿಕೆಟಿಗ ಇರ್ಫಾನ್‌ ಪಠಾಣ್‌ ಮುಖ್ಯಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಇದು ಅವರ ಮೊದಲ ಚಿತ್ರವೂ ಹೌದು.  ಕಥೆ:  ಸಿನಿಮಾದಲ್ಲಿ ಮಧಿ (ವಿಕ್ರಂ) ಒಬ್ಬ ಗಣಿತ ಶಿಕ್ಷಕ ಕಮ್ ಮಾಫಿಕಾ ಕಿಲ್ಲರ್, ಅವನು ತನ್ನ ಆದಾಯವನ್ನು ಅನಾಥಾಶ್ರಮಗಳು ಮತ್ತು ಚಾರಿಟಿ ಹೋಮ್‌ಗಳಗೆ ನೀಡುತ್ತಿರುತ್ತಾನೆ. ಅವನಿಗೆ ಆಘಾತಕಾರಿ ಬಾಲ್ಯದ ನೆನಪಿದೆ ಅದರಿಂದಾಗಿ ಮಾನಸಿಕ ಸಮಸ್ಯೆಯೊಂದು ಆತನನ್ನು ಕಾಡುತ್ತಿದೆ. ಕತೆಯಲ್ಲಿ, ಶ್ರೀನಿಧಿ ಶೆಟ್ಟಿ ನಟಿಸಿರುವ ಭಾವನಾ ಪಾತ್ರ ತನ್ನೆಡೆ ತೋರಿದ ಪ್ರೀತಿ, ಆಸಕ್ತಿಯನ್ನು ಒಪ್ಪಿಕೊಳ್ಳಬೇಕೋ ಅಥವಾ ತಿರಸ್ಕರಿಸಬೇಕೋ ಎಂಬ ಸಂದಿಗ್ಧತೆಯೊಂದಿಗೆ ಹೋರಾಡುತ್ತಿರುವಾಗಲೇ, ಮಾಧಿ, ತನ್ನನ್ನು ಹುಡುಕಿ ಬರುತ್ತಿರುವ ಇಂಟರ್‌ಪೋಲ್ ಅಧಿಕಾರಿಯೊಬ್ಬನು ನಿಭಾಯಿಸಬೇಕಾಗಿದೆ. ಈ ಮಧ್ಯೆ, ಮಾಧಿಯ ಬುದ್ಧಿವಂತಿಕೆಯಿಂದ ಲಾಭ ಪಡೆದುಕೊಳ್ಳುತ್ತಿರುವ ವ್ಯಕ್ತಿ ತನ್ನನ್ನು ಉಳಿಸಿಕೊಳ್ಳಲು ಮಾಧಿಯನ್ನು ಬಲಿಪಶು ಮಾಡುತ್ತಾನೆ.
Read More

ಕೋಬ್ರಾ ಕಲಾವಿದರು ಮತ್ತು ಸಿಬ್ಬಂದಿ

ಕೋಬ್ರಾ ಕ್ರೂ ಮಾಹಿತಿ

ನಿರ್ದೇಶಕ ಅಜಯ್ ಜ್ಞಾನಮುತ್ತು ಆರ್
ಸಿನಿಮಾಟೋಗ್ರಫಿ NA
ಸಂಪಾದಕ ಭುವನ್ ಶ್ರೀನಿವಾಸನ್
ಸಂಗೀತ NA
ನಿರ್ಮಾಪಕ ಲಲಿತ್ ಕುಮಾರ್
ಬಜೆಟ್ TBA
ಬಾಕ್ಸ್ ಆಫೀಸ್ TBA
ಒಟಿಟಿ ಪ್ಲಾಟ್ ಫಾರ್ಮ್ TBA
ಒಟಿಟಿ ರಿಲೀಸ್ ದಿನಾಂಕ TBA

ಕೋಬ್ರಾ ವಿಮರ್ಶಕರ ವಿಮರ್ಶೆ

ವಿಕ್ರಂ ನಟನೆಯ ಕೋಬ್ರ ಸಿನಿಮಾ ವಿಮರ್ಶೆ
ಈ ಸಿನಿಮಾವು ನಟ ವಿಕ್ರಮ್ ಪ್ರತಿಭೆಗೆ ಸಲ್ಲಿಸಿದ ಗೌರವ ಎನ್ನಬಹುದು. ಭಿನ್ನತೆ, ಏರಿಳಿತವುಳ್ಳ ಮತ್ತು ಆಳ ಭಾವನೆಗಳ ಆಟವುಳ್ಳ ಪಾತ್ರವನ್ನು ವಿಕ್ರಂಗಾಗಿ ಸೃಷ್ಟಿಸಲಾಗಿದೆ. 'ಕೋಬ್ರಾ' ಸಿನಿಮಾ ಅವರ ವೃತ್ತಿಜೀವನದ ಅತ್ಯುತ್ತಮ ಪ್ರದರ್ಶನಗಳಲ್ಲಿ ಒಂದು ಎನ್ನಬಹುದು. ಸಿನಿಮಾದ ನಾಯಕ ಪಾತ್ರದಲ್ಲಿ ವಿಕ್ರಂನ ಹೊರತಾಗಿ ಇನ್ನಾರನ್ನೂ ಊಹಿಸಿಕೊಳ್ಳಲು ಸಹ ಸಾಧ್ಯವಿಲ್ಲದ ಮಾದರಿಯಲ್ಲಿ ವಿಕ್ರಂ ನಟಿಸಿದ್ದಾರೆ. ಗಣಿತದ ಮೇರು ಪ್ರತಿಭೆಯಾಗಿರುವ ನಾಯಕ ಜೀವನದಲ್ಲಿ ಕೆಲವು ಕಹಿ ನೆನೆಪುಗಳನ್ನು ಸಹ ಹೊಂದಿದ್ದಾನೆ. ಏನೇ ಕ್ಲಿಷ್ಟಕರ ಸನ್ನಿವೇಶಗಳು ಎದುರಾದರೂ ಅವನ್ನು ಗಣಿತದ ಮೂಲಕ ನಿರ್ವಹಿಸುತ್ತಾನೆ. ಸಿನಿಮಾದಲ್ಲಿ ಈ ಬರವಣಿಗೆಗಳು ಅವನ ಯೋಜನೆಗಳನ್ನು ಹಾಸ್ಯದಂತೆ ಕಾಣದಂತೆ ಸಾಕಷ್ಟು ಪ್ರಾಮಾಣಿಕವಾಗಿದೆ. ಪ್ರೇಕ್ಷಕರು ನಂಬುವಂತೆ ಚಿತ್ರಿಸಲಾಗಿದೆ. ಈ ಚಿತ್ರದಲ್ಲಿ ಆಕ್ಷನ್‌ಗೆ ಕೊರತೆಯಿಲ್ಲ, ಕಥೆಯು ಬುದ್ದಿಜೀವಿಯ ಸುತ್ತ ಸುತ್ತುತ್ತದೆ ಎಂದು ಪರಿಗಣಿಸಬಹುದು. ಆದಾಗ್ಯೂ, ಈ ಬುದ್ಧಿಜೀವಿಯು ಕೆಲವು ಸನ್ನಿವೇಶಗಳನ್ನು ನಿಭಾಯಿಸಲು ಬಾಹುಬಲವನ್ನು ಬಳಸುತ್ತಾನೆ. ಅತ್ಯುತ್ತಮವಾಗಿ ನಟಿಸಿರುವ ವಿಕ್ರಮ್ ಅತ್ಯುತ್ತಮವಾಗಿ ನಟಿಸಿರುವ ವಿಕ್ರಮ್, ಸಿನಿಮಾದಲ್ಲಿನ ಸೋಷಿಯೋಪಾತ್ ವ್ಯಕ್ತಿತ್ವದ ಪಾತ್ರಕ್ಕೆ ಚೆನ್ನಾಗಿ ಹೊಂದಿಕೊಂಡಿದ್ದಾರೆ. ಬರವಣಿಗೆ ಕೀಳಾಗಿಲ್ಲ ಮತ್ತು ಕತೆಯ ಉದ್ದೇಶಕ್ಕೆ ಧಕ್ಕೆ ಆಗದಂತೆ ನಿರೂಪಣೆ ಮಾಡಲಾಗಿದೆ. ಚಿತ್ರದಲ್ಲಿನ ವಿಕ್ರಮ್ ಅವರ ಅನೇಕ ಅವತಾರಗಳು ವೀಕ್ಷಕರನ್ನು ತೃಪ್ತಿಪಡಿಸುತ್ತವೆ ಮತ್ತು ವಿಕ್ರಮ್‌ ಅನ್ನು ಪ್ರತಿ ಅವತಾರದಲ್ಲೂ ನೋಡಿದಾಗ ಶಿಳ್ಳೆ ಹೊಡೆಯಬೇಕೆನ್ನಿಸುತ್ತದೆ. ನಿರೂಪಣೆಯು ಸುಸಂಬದ್ಧವಾಗಿದೆ ಮತ್ತು ತಾರ್ಕಿಕ ನ್ಯೂನತೆಗಳಿಗೆ ಹೆಚ್ಚು ಅವಕಾಶ ನೀಡಿಲ್ಲ.

ಕೋಬ್ರಾ ಪಾಟ್ಲುಗಳು

Music Director:

ಕೋಬ್ರಾ ಸಿನಿಮಾ ನೋಡುಗರ ವಿಮರ್ಶೆ

  • ಕಥೆ
  • ಕ್ರಿಯೆ
  • ದಿಕ್ಕು
  • ಚಿತ್ರ ರೇಟಿಂಗ್

×
2.5 /5 Your Rating

ಕೋಬ್ರಾ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+