ಡೈಮಂಡ್ ಕ್ರಾಸ್ ಸಿನಿಮಾವನ್ನು ರಾಮ್‌ದೀಪ್ ರಾಮೇಗೌಡ ನಿರ್ದೇಶನ ಮಾಡಿದ್ದಾರೆ. ಚಿತ್ರದಲ್ಲಿ ರೋಜರ್ ನಾರಾಯಣ್ ನಾಯಕನಾಗಿ ಹಾಗೂ ರೂಪಿಕಾ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಉಳಿದಂತೆ ರಜತ್ ಅಣ್ಣಪ್ಪ, ಮನು ಕೆ ಮಲ್ಲೇಗೌಡ, ಶೇಷಾದ್ರಿ ವೆಂಕಟರಾಮಯ್ಯ, ರಂಜಿತ್ ಕೆ ಶೆಟ್ಟಿ ಮುಂತಾದವರು ನಟಿಸಿದ್ದಾರೆ. ಮನೀಶ್ ಮೆಹ್ತಾ ಹೊಸಪೇಟೆ ಈ ಸಿನಿಮಾಗೆ ಬಂಡವಾಳ ಹೂಡಿದ್ದಾರೆ. ಸಂತೋಷ್ ರಾಧಾಕೃಷ್ಣನನ್ ಛಾಯಾಗ್ರಹಣ ಹಾಗೂ ಲೇಖನ್ ನರೇಶ್ ಗೌಡ ಸಂಗೀತ ಚಿತ್ರಕ್ಕಿದೆ.