ಕೆ.ಟಿ.ನಾಯಕ್ ನಿರ್ದೇಶನದಲ್ಲಿ ಮೂಡಿಬಂದ ಕ್ರೈಮ್ ಚಿತ್ರ ದಂಡುಪಾಳ್ಯ 4 ರಲ್ಲಿ ಸುಮನ್ ರಂಗನಾಥನ್ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ವೆಂಕಟ್ ಚಿತ್ರಕ್ಕೆ ಬಂಡವಾಳ ಹೂಡಿದ್ದರೆ, ಆನಂದ್ ರಾಜಾವಿಕ್ರಮನ್ ಸಂಗೀತ ನೀಡಿದ್ದಾರೆ.ವಿಜಯ್ ಆನಂದ್ ಈ ಚಿತ್ರ ನವೆಂಬರ್ 1 ರಂದು ಕನ್ನಡ ಮತ್ತು ತೆಲುಗು ಭಾಷೆಗಳಲ್ಲಿ ಬಿಡುಗಡೆಯಾಯಿತು.
ಕೊಲೆ, ಅತ್ಯಾಚಾರ, ದರೋಡೆ ಆರೋಪವೊತ್ತು ಜೈಲು ಸೇರಿರುವ ದಂಡುಪಾಳ್ಯ ಗ್ಯಾಂಗ್ ಜೊತೆಯಲ್ಲಿದ್ದು, ತಪ್ಪಿಸಿಕೊಂಡಿದ್ದವರ ಕಥೆ ಇದು. ಜೈಲು ಶಿಕ್ಷೆಗೆ ಒಳಗಾಗಿರುವ ಸ್ನೇಹಿತರನ್ನ ಬಿಡುಗಡೆಗೊಳಿಸಬೇಕು, ಕಾಪಾಡಬೇಕು ಎಂಬ ಉದ್ದೇಶದಿಂದ ರಾಜಕಾರಣಿಗಳು, ಕೆಲವು ಗಣ್ಯ ವ್ಯಕ್ತಿಗಳ ಮೊರೆ ಹೋಗ್ತಾರೆ.
ಆ ವ್ಯಕ್ತಿಗಳ ಅನುಕೂಲಕ್ಕೆ ಈ ದಂಡುಪಾಳ್ಯ ಗ್ಯಾಂಗ್ ಜನರನ್ನು ಬಳಸಿಕೊಳ್ಳಲಾಗುತ್ತೆ. ಕೆಲವರನ್ನ ಟಾರ್ಗೆಟ್ ಮಾಡಿ ಕೊಲೆ ಮಾಡಿಸಲಾಗುತ್ತೆ. ಪೊಲೀಸರಿಂದ ತಲೆ ಮರೆಸಿಕೊಳ್ಳಲು, ಊರು ಬಿಟ್ಟು ಊರಿಗೆ ಹೋಗುವ ಇವರು, ದುಡ್ಡಿಗಾಗಿ ಸಿಕ್ಕ ಸಿಕ್ಕ ಅಮಾಯಕ ಹೆಣ್ಣು ಮಕ್ಕಳನ್ನು ಅತ್ಯಾಚಾರ ಮಾಡಿ, ಕೊಲೆ ಮಾಡ್ತಾರೆ.