X
ಡೇರ್ ಡೆವಿಲ್ ಮುಸ್ತಾಫಾ
Comedy | 19 May 2023 | U | 160 Mins
Kannada

ಡೇರ್ ಡೆವಿಲ್ ಮುಸ್ತಾಫಾ ಕಥೆ

ಡೇರ್ ಡೆವಿಲ್ ಮುಸ್ತಾಫಾ ಸಿನಿಮಾವನ್ನು ಶಶಾಂಕ್ ಸೊಘಲ್ ನಿರ್ದೇಶನ ಮಾಡಿದ್ದಾರೆ. ಇದೊಂದು ಕಾಮಿಡಿ ಎಂಟರ್ಟೈನರ್ ಚಿತ್ರವಾಗಿದ್ದು, ಆದಿತ್ಯ ಅಶ್ರೀ,  ಅಭಯ್, ಸುಪ್ರೀತಾ ಭಾರಧ್ವಾಜ್, ಆಶಿತ್, ಶ್ರೀವತ್ಸ, ಪ್ರೇರಣಾ, ಎಂ.ಎಸ್.ಉಮೇಶ್, ಮದ್ಯ ರಮೇಶ್, ಮೈಸೂರು ಆನಂದ್, ಸುಂದರ್ ವೀಣಾ, ಹರಿಣಿ ನಾಗಭೂಷಣ, ಪೂರ್ಣಚಂದ್ರ ಮೈಸೂರು, ವಿಜಯ್ ಶೋಭರಾಜ್, ಚೈತ್ರ ಶೆಟ್ಟಿ, ಕಾರ್ತಿಕ್ ಪತ್ತರ್  ಮುಂತಾದ ಕಲಾವಿದರು ನಟಿಸಿದ್ದಾರೆ. ಈ ಚಿತ್ರಕ್ಕೆ ನವನೀತ್ ಶ್ಯಾಮ್ ಸಂಗೀತ ನಿರ್ದೇಶಿಸಿದ್ದು, ರಾಹುಲ್ ರಾಯ್ ಛಾಯಾಗ್ರಹಣ ಮಾಡಿದ್ದಾರೆ. 

ಕುವೆಂಪು ಮತ್ತು ಅವರ ಮಗ ಪೂರ್ಣಚಂದ್ರ ತೇಜಸ್ವಿ ಅವರಿಗೆ ಇರುವ ಅಭಿಮಾನಿಗಳು ಯಾವ ಸಿನಿಮಾ ಸ್ಟಾರ್ ಗಿಂತ ಕಡಿಮೆ ಏನು ಇಲ್ಲ. ಪುಸ್ತಕ ಓದುವ ಹವ್ಯಾಸ ಇದ್ದವರಿಗೂ ಪೂರ್ಣಚಂದ್ರ ತೇಜಸ್ವಿ ಅವರ ಪುಸ್ತಕದ ಪರಿಚಯವಿದ್ದೆ ಇರುತ್ತದೆ. ಅವರಿಗೆ ಅಷ್ಟು ಅಭಿಮಾನಿಗಳಿದ್ದಾರೆ. ತೇಜಸ್ವಿ ಅವರು ಬರೆದ ಪುಸ್ತಕದಲ್ಲಿ ಡೇರ್ ಡೆವಿಲ್ ಮುಸ್ತಫಾ ಕೂಡ ಒಂದು. ಈ ಪುಸ್ತಕವೇ ಈಗ ಸಿನಿಮಾವಾಗಿ ಹೊರ ಬಂದಿದೆ.

ಕಥೆ: ಟೈಟಲ್ ಮತ್ತು ಸಬ್ ಟೈಟಲ್ ಹೇಳುವಂತೆ ಮುಸ್ತಫಾ ಮತ್ತೆ ರಾಮಾನುಜ ಅಯ್ಯಂಗಾರಿ ಪಟಾಲಂ ನಡುವೆ ಯುದ್ಧವೇ ನಡೆಯುತ್ತಿರುತ್ತೆ. ಅಯ್ಯಂಗಾರಿ ಮನೆಯಲ್ಲಿ ನಡೆದ ಒಂದೇ ಒಂದು ಘಟನೆಯಿಂದ ಮುಸ್ತಫಾ ಒಳ್ಳೆಯವನಾದರೂ ಕೆಟ್ಟವನಾಗಿಯೇ ಕಾಣುತ್ತಾನೆ. ಇನ್ನು ಅಯ್ಯಾಂಗಾರಿ ಗ್ಯಾಂಗ್ ಕೂಡ ಕಾಲೇಜು ಶುರುವಾದಾಗಿನಿಂದ ಮುಸ್ತಫಾಗೆ ತೊಂದರೆ ಕೊಡುತ್ತಲೇ ಬರುತ್ತದೆ. ಅದರಿಂದ ಅಯ್ಯಂಗಾರಿ ಎಲ್ಲವನ್ನು ಕಳೆದುಕೊಳ್ಳುತ್ತಾನೆ. ಮುಸ್ತಫಾ ಪಡೆದುಕೊಳ್ಳುತ್ತಾ ಬರುತ್ತಾನೆ. ಕಾಲೇಜಿನಲ್ಲೂ ಹೀರೊ ಆಗಿ ಬಿಡುತ್ತಾನೆ. ಹೀಗೆ ಇಬ್ಬರು ಹುಡುಗರ ನಡುವಿನ ಕಿತ್ತಾಟ ಸಿನಿಮಾದಲ್ಲಿದೆ. 

ಒಂದು ಪುಸ್ತಕವನ್ನು ಓದುವಾಗ ಬರುವ ಊಹೆಯೆ ಬೇರೆ. ಅದನ್ನೇ ತೆರೆ ಮೇಲೆ ನೋಡಿದಾಗ ಮೂಡುವ ದೃಶ್ಯವೇ ಬೇರೆ. 'ಡೇರ್ ಡೆವಿಲ್ ಮುಸ್ತಫಾ' ಸಿನಿಮಾ ಕೂಡ ಕೆಲವೊಂದಿಷ್ಟು ಬದಲಾವಣೆಯನ್ನು ಹೊತ್ತು ಬಂದಿದೆ. ಓದುವಾಗ ಆ ಪಾತ್ರಗಳೆಲ್ಲಾ ನಮ್ಮ ಊಹೆಗೆ ಬಿಟ್ಟಿರುತ್ತದೆ. ಆದರೆ ಸಿನಿಮಾದಲ್ಲಿ ಕಣ್ಣ ಮುಂದೆಯೇ ಆ ಪಾತ್ರಗಳು ಕಾಣಿಸುತ್ತವೆ. ಈ ಸಿನಿಮಾದಲ್ಲಿ ಒಂದಷ್ಟು ನಮ್ಮ ನಿನ್ಮ ಕಾಲೇಜಿನ ದಿನಗಳು ಬಂದು ಹೋಗುತ್ತವೆ. 

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+