ನಾನಿ ನಾಯಕನಾಗಿ ನಟಿಸಿರುವ 'ದಸರಾ' ಸಿನಿಮಾವನ್ನು ಶ್ರೀಕಾಂತ್ ಒಡೆಲಾ ನಿರ್ದೇಶನ ಮಾಡಿದ್ದಾರೆ. ಇದು ಅವರ ಚೊಚ್ಚಲ ಸಿನಿಮಾವಾಗಿದ್ದು, ಮೊದಲ ಪ್ರಯತ್ನದಲ್ಲೇ ಪ್ಯಾನ್ ಇಂಡಿಯಾ ಸಿನಿಮಾ ನಿರ್ದೇಶನ ಮಾಡಿದ್ದಾರೆ. ತೆಲಂಗಾಣದ ಸಿಂಗರೇಣಿ ಕಲ್ಲಿದ್ದಲು ಗಣಿಯ ಕಥೆ ಈ ಸಿನಿಮಾದಲ್ಲಿ ಹೇಳಲಾಗಿದೆ. ಈ ಸಿನಿಮಾದಲ್ಲಿ ಕೀರ್ತಿ ಸುರೇಶ ನಾಯಕಿಯಾಗಿ ನಟಿಸಿದ್ದು, ಡಿ ಗ್ಲಾಮರ್ ರೋಲ್ ಮಾಡಿದ್ದಾರೆ. ಅವರು ವೆನ್ನೆಲ್ಲಾ ಎಂಬ ಪಾತ್ರವನ್ನು ನಿರ್ವಹಿಸಿದ್ದಾರೆ. ನಾಣಿ 'ಧರಣಿ' ಹೆಸರಿನ ಪಾತ್ರವನ್ನು ನಿರ್ವಹಿಸಿದ್ದಾರೆ.
ಇನ್ನು ಕನ್ನಡದ 'ದಿಯಾ' ಸಿನಿಮಾ ಖ್ಯಾತಿಯ ದೀಕ್ಷಿತ್ ಶೆಟ್ಟಿ ದಸರಾ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ನಾಯಕ ನಟ ನಾನಿ ಗೆಳೆಯನಾಗಿ ಮಿಂಚಿದ್ದಾರೆ.
ಬಿಡುಗಡೆ: ದಸರಾ ಸಿನಿಮಾ ಮಾರ್ಚ್ ೩೦ರಂದು ತೆಲುಗು, ಕನ್ನಡ, ಮಲಯಾಳಂ, ಹಿಂದಿ ಹಾಗೂ ತಮಿಳಿನಲ್ಲಿ ರಿಲೀಸ್ ಆಯಿತು.