ಧೀರ ಸಾಮ್ರಾಟ್ ಸಿನಿಮಾ ಪವನ್ ಕುಮಾರ್ (ಪಚ್ಚಿ) ನಿರ್ದೇಶನ ಮಾಡಿದ್ದಾರೆ. ರಾಕೇಶ್ ಬಿರಾದಾರ್ ಮತ್ತು ಅದ್ವಿತಿ ಶೆಟ್ಟಿ ನಾಯಕ ನಾಯಕಿಯರಾಗಿ ನಟಿಸಿರುವ ಈ ಚಿತ್ರದಲ್ಲಿ ಶೋಭರಾಜ್, ರಮೇಶ್ ಭಟ್, ಹರೀಶ್ ಅರಸು, ಬಾಲ ರಾಜವಾಡಿ, ಮನಮೋಹನ್ ರೈ ಮುಂತಾದವರ ತಾರಾಗಣವಿದೆ.
ಅರುಣ್ ಅರಸ್ ಛಾಯಾಗ್ರಹಣ, ರಾಘವ್ ಸಂತೋಷ್ ಸಂಗೀತ ನಿರ್ದೇಶನ, ಕೌರವ ವೆಂಕಟೇಶ್ ಸಾಹಸ ನಿರ್ದೇಶನವಿದೆ. ತನ್ವಿ ಪ್ರೊಡಕ್ಷನ್ ಹೌಸ್ ಬ್ಯಾನರಿನಡಿಯಲ್ಲಿ ಗುರು ಬಂಡಿ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಇದು ಐವರು ಕೆಚ್ಚೆದೆಯ ಹುಡುಗರ ಕಥೆಯಾಗಿದ್ದು, ರೋಮಾಂಚಕ ಕ್ಲೈಮ್ಯಾಕ್ಸ್‌ನೊಂದಿಗೆ ಸಸ್ಪೆನ್ಸ್ ತುಂಬಿದ ಕಥಾವಸ್ತುವನ್ನು ಹೊಂದಿದೆ.
ಬಿಡುಗಡೆ: ಧೀರ ಸಾಮ್ರಾಟ್ ಸಿನಿಮಾ ಫೆಬ್ರವರಿ 16ರಂದು ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಯಿತು.