ದ್ವಿಪಾತ್ರ ಕನ್ನಡ ಸಿನಿಮಾವನ್ನು ಶ್ರೀವತ್ಸ ಆರ್ ನಚೊಚ್ಚಲ ಬಾರಿಗೆ ನಿರ್ದೇಶನ ಮಾಡಿದ್ದಾರೆ. ಸಿನಿಮಾದಲ್ಲಿ ಚಂದು ಗೌಡ ನಾಯಕನಾಗಿ ನಟಿಸುತ್ತಿದ್ದಾರೆ. ಇವರ ಜೊತೆ ಸತ್ಯ ಕೂಡ ನಾಯಕನಾಗಿ ನಟಿಸುತ್ತಿದ್ದಾರೆ. ಮಾಳವಿಕಾ ಅವಿನಾಶ್, ಪಾಯಲ್ ಚೆಂಗಪ್ಪ, ಅವಿನಾಶ್, ಸುಚೇಂದ್ರ ಪ್ರಸಾದ್, ಅಶ್ವಥ್ ನೀನಾಸಂ, ಸ್ನೇಹ ಹೆಗಡೆ, ಪ್ರಶಾಂತ್ ಸಿದ್ದಿ, ರಘು ವೈನ್ ಸ್ಟೋರ್ ಸೇರಿದಂತೆ ಅನೇಕರು ನಟಿಸುತ್ತಿದ್ದಾರೆ.
ಒಂದೊಂದು ಮರ್ಡರ್ ಮಿಸ್ಟರಿ ಸಿನಿಮಾ. ಸಸ್ಪೆನ್ಸ್-ಥ್ರಿಲ್ಲರ್ ಶೈಲಿಯಲ್ಲಿ ಸಿದ್ಧವಾಗಿರುವ ಈ ಚಿತ್ರದಲ್ಲಿ ಸೈಕೋ ಕಿಲ್ಲರ್ ಕಹಾನಿ ಹೈಲೈಟ್ ಆಗಿರಲಿದೆ. ಈ ಚಿತ್ರದಲ್ಲಿ ತನಿಖಾಧಿಕಾರಿ ಪಾತ್ರಕ್ಕೆ ಚಂದು ಗೌಡ ಬಣ್ಣ ಹಚ್ಚಿದ್ದಾರೆ. ಇವರಿಗೆ ಜೋಡಿಯಾಗಿ ಸ್ನೇಹ ಹೆಗಡೆ ಬಣ್ಣ ಹಚ್ಚಿದ್ದಾರೆ. ಅಮೃತಾಂಜನ್ ಕಿರುಚಿತ್ರದ ಮೂಲಕ ಫೇಮಸ್ ಆಗಿರುವ ನಟಿ ಪಾಯಲ್ ಚೆಂಗಪ್ಪ ಈ ಸಿನಿಮಾದಲ್ಲಿ ಡಿಟೆಕ್ಟಿವ್ ಪಾತ್ರ ಮಾಡಿದ್ದಾರೆ.
ಸತ್ಯಾಶ್ರಯ, ಹೆಬ್ಬಗೋಡಿ ಮದುಸೂಧನ್, ಜಯಶ್ರೀ ಅವರು ಜೊತೆಯಾಗಿ ಈ ಸಿನಿಮಾಗೆ ಬಂಡವಾಳ ಹೂಡಿದ್ದಾರೆ. ಅಮರ್ ಗೌಡ ಛಾಯಾಗ್ರಹಣ, ಮಂಜು ಆರ್, ಸಂಕಲನ ಮಾಡಿದ್ದಾರೆ.