twitter

    ಏಕ್ ಲವ್ ಯಾ ಕಥೆ

    ಜೋಗಿ ಪ್ರೇಮ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ `ಎಕ್ ಲವ್ ಯಾ' ಚಿತ್ರದಲ್ಲಿ ರಕ್ಷಿತಾರ ಸಹೋದರ ರಾಣಾ ನಾಯಕನಾಗಿ ನಟಿಸಿದ್ದಾರೆ. ಚಿತ್ರದಲ್ಲಿ ಡಿಂಪಲ್ ಕ್ವೀನ್ ರಚಿತಾ ರಾಮ್ ಪ್ರಮುಖ ಪಾತ್ರವನ್ನು ಮಾಡfದ್ದಾರೆ. ರಕ್ಷಿತಾ ಪ್ರೇಮ್ ರವರೇ ರಕ್ಷಿತಾ ಫಿಲ್ಮ್ ಫ್ಯಾಕ್ಟರಿ ಬ್ಯಾನರ್ ಅಡಿಯಲ್ಲಿ ನಿರ್ಮಾಣ ಮಾಡಿದ್ದಾರೆ. ರೀಷ್ಮಾ ನಾಣಯ್ಯ ಮತ್ತು ಅಂಕಿತಾ ನಾಯಕ್ ನಾಯಕಿಯರಾಗಿ ನಟಿಸಿದ್ದಾರೆ.ಈ ಮ್ಯೂಸಿಕಲ್ ಆ್ಯಕ್ಷನ್  ಚಿತ್ರಕ್ಕೆ ಅರ್ಜುನ ಜನ್ಯ ಸಂಗೀತವಿದೆ. ಚಿತ್ರದಲ್ಲಿ ರಚಿತಾ ಟಾಮ್ ಬಾಯ್ ಕ್ಯಾರೆಕ್ಟರ್ ನಲ್ಲಿ ಮಿಂಚಿದ್ದಾರೆ.

    ಕಥೆ: ಚಿತ್ರದ ನಾಯಕ ಅಮರ್ ಬದುಕಿನಲ್ಲಿ ಏಪ್ರಿಲ್ 28 ಜೀವನಕ್ಕೆ ತಿರುವು ನೀಡಿದ ದಿನ. ನಂತರ ನಾಯಕನ ಹಿಂದೆ ಬೋಲ್ಡ್ ಆದ ರಚಿತಾ ರಾಮ್ ಮೀಟ್ ಮಾಡೋಣ ಇಲ್ಲ ಡೇಟ್ ಮಾಡೋಣ ಅಂತ ಹಿಂದೆ ಬೀಳುತ್ತಾಳೆ. ಇದಕ್ಕೂ ಒಂದು ಬಲವಾದ ಕಾರಣ ಇರುತ್ತದೆ. ಆದರೆ ಯಾರೇ ಹಿಂದೆ ಬಿದ್ದರೂ, ನಾಯಕನ ಮೊದಲ ಪ್ರೀತಿ ಅನಿತಾಗೆ ( ರೀಷ್ಮಾ ನಾಣಯ್ಯ) ಮಾತ್ರ ಮೀಸಲಿರುತ್ತದೆ. ಅಮರ್ ಅನಿತಾಳನ್ನು ಪ್ರೀತಿಸಿದಾಗ, ಅಮರ್ ತಂದೆಯೇ ಅದಕ್ಕೆ ವಿಲನ್ ಆಗುತ್ತಾರೆ. ಇದು ತಿಳಿಯದೇ ನಾಯಕ ತನ್ನ ಪ್ರೀತಿಯನ್ನು ಪಡೆಯಲು ಒದ್ದಾಡುತ್ತಾನೆ. 


    ಓದೋದ್ರಲ್ಲಿ ಕಾಲೇಜಿಗೆ ಫಸ್ಟ್ ಇದ್ದರು, ಬಿಟ್ಟು ಹೊದ ಪ್ರೇಮಿಯ ನೆನಪಲ್ಲಿ ಕುಡಿಯುತ್ತಾ, ಸಮಯ ದೂಡುತ್ತಾ ಇರುತ್ತಾನೆ. ಆದರೆ ಅಪ್ಪನ ಕಷ್ಟಕ್ಕೆ ಕರಗಿದ ನಾಯಕನಿಗೆ ಮನವರಿಕೆ ಆಗಿ, ಜೀವನದಲ್ಲಿ ಮುಂದುವರೆಯಲು ನಿರ್ಧರಿಸುತ್ತಾನೆ.

     

    ಆದರೆ ತನ್ನ ಪ್ರೀತಿಯಿಂದಲೇ ನಾಯಕನಿಗೆ ದೊಡ್ಡ ಕಂಟಕ ಬರುತ್ತದೆ. ನಾಯಕಿಯ ಅತ್ಯಾಚಾರವಾಗಿ, ಅದು ನಾಯಕನ ಮೇಲೆಯೇ ಬರುತ್ತದೆ. ಈ ಕಳಂಕವನ್ನು ನಾಯಕ ಹೇಗೆ ತಪ್ಪಿಸಿಕೊಳ್ಳುತ್ತಾನೆ ಎಂಬುದು ಚಿತ್ರದ ಮುಖ್ಯ ಕಥಾವಸ್ತು.

    ಚಿತ್ರದ ಬೆಳವಣಿಗೆ: ಮೇ 2019 ರಲ್ಲಿ ಚಿತ್ರದ ಚಿತ್ರೀಕರಣ ಆರಂಭವಾಯಿತು. ಚಿತ್ರದ ಮುಹೂರ್ತ ಮೇ 18 ರಂದು ಮಲೆ ಮಹಾದೇಶ್ವರ ಬೆಟ್ಟದಲ್ಲಿ ನೇರವೇರಿತು.ಚಿತ್ರದ ಟೀಸರ್ 2020 ಫೆಬ್ರವರಿ 14 ರಂದು ಪ್ರೇಮಿಗಳ ದಿನಾಚರಣೆ ಪ್ರಯುಕ್ತ ಬಿಡುಗಡೆಯಾಯಿತು. ಟೀಸರ್ ಬಿಡುಗಡೆಗೂ ಒಂದು ದಿನ ಮುನ್ನ ರಚಿತಾ ರಾಮ್ ಸಿಗರೇಟ್ ಸೇದುತ್ತಿರುವ ದೃಶ್ಯ ವೈರಲ್ ಆಗಿತ್ತು. ಟೀಸರ್ ನಲ್ಲಿನ ರಚಿತಾ ರಾಮ್ ಲಿಪ್ ಲಾಕ್ ದೃಶ್ಯ ಹಲವರ ಹುಬ್ಬೇರಿಸಿತು.

    **Note:Hey! Would you like to share the story of the movie ಏಕ್ ಲವ್ ಯಾ with us? Please send it to us ([email protected]).
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X