X
ಕನ್ನಡ » ಚಲಚಿತ್ರಗಳು » ಏಕ್ ಲವ್ ಯಾ
ಏಕ್ ಲವ್ ಯಾ

ಏಕ್ ಲವ್ ಯಾ

Action | Musical | 24 Feb 2022 |
Kannada

2.8 /5 Users

3 /5 Filmibeat

ಏಕ್ ಲವ್ ಯಾ ಕಥೆ

ಜೋಗಿ ಪ್ರೇಮ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ `ಎಕ್ ಲವ್ ಯಾ' ಚಿತ್ರದಲ್ಲಿ ರಕ್ಷಿತಾರ ಸಹೋದರ ರಾಣಾ ನಾಯಕನಾಗಿ ನಟಿಸಿದ್ದಾರೆ. ಚಿತ್ರದಲ್ಲಿ ಡಿಂಪಲ್ ಕ್ವೀನ್ ರಚಿತಾ ರಾಮ್ ಪ್ರಮುಖ ಪಾತ್ರವನ್ನು ಮಾಡfದ್ದಾರೆ. ರಕ್ಷಿತಾ ಪ್ರೇಮ್ ರವರೇ ರಕ್ಷಿತಾ ಫಿಲ್ಮ್ ಫ್ಯಾಕ್ಟರಿ ಬ್ಯಾನರ್ ಅಡಿಯಲ್ಲಿ ನಿರ್ಮಾಣ ಮಾಡಿದ್ದಾರೆ. ರೀಷ್ಮಾ ನಾಣಯ್ಯ ಮತ್ತು ಅಂಕಿತಾ ನಾಯಕ್ ನಾಯಕಿಯರಾಗಿ ನಟಿಸಿದ್ದಾರೆ.ಈ ಮ್ಯೂಸಿಕಲ್ ಆ್ಯಕ್ಷನ್  ಚಿತ್ರಕ್ಕೆ ಅರ್ಜುನ ಜನ್ಯ ಸಂಗೀತವಿದೆ. ಚಿತ್ರದಲ್ಲಿ ರಚಿತಾ ಟಾಮ್ ಬಾಯ್ ಕ್ಯಾರೆಕ್ಟರ್ ನಲ್ಲಿ ಮಿಂಚಿದ್ದಾರೆ. ಕಥೆ : ಚಿತ್ರದ ನಾಯಕ ಅಮರ್ ಬದುಕಿನಲ್ಲಿ ಏಪ್ರಿಲ್ 28 ಜೀವನಕ್ಕೆ ತಿರುವು ನೀಡಿದ ದಿನ. ನಂತರ ನಾಯಕನ ಹಿಂದೆ ಬೋಲ್ಡ್ ಆದ ರಚಿತಾ ರಾಮ್ ಮೀಟ್ ಮಾಡೋಣ ಇಲ್ಲ ಡೇಟ್ ಮಾಡೋಣ ಅಂತ ಹಿಂದೆ ಬೀಳುತ್ತಾಳೆ. ಇದಕ್ಕೂ ಒಂದು ಬಲವಾದ ಕಾರಣ ಇರುತ್ತದೆ. ಆದರೆ ಯಾರೇ ಹಿಂದೆ ಬಿದ್ದರೂ, ನಾಯಕನ ಮೊದಲ ಪ್ರೀತಿ ಅನಿತಾಗೆ ( ರೀಷ್ಮಾ ನಾಣಯ್ಯ) ಮಾತ್ರ ಮೀಸಲಿರುತ್ತದೆ. ಅಮರ್ ಅನಿತಾಳನ್ನು ಪ್ರೀತಿಸಿದಾಗ, ಅಮರ್ ತಂದೆಯೇ ಅದಕ್ಕೆ ವಿಲನ್ ಆಗುತ್ತಾರೆ. ಇದು ತಿಳಿಯದೇ ನಾಯಕ ತನ್ನ ಪ್ರೀತಿಯನ್ನು ಪಡೆಯಲು ಒದ್ದಾಡುತ್ತಾನೆ.  ಓದೋದ್ರಲ್ಲಿ ಕಾಲೇಜಿಗೆ ಫಸ್ಟ್ ಇದ್ದರು, ಬಿಟ್ಟು ಹೊದ ಪ್ರೇಮಿಯ ನೆನಪಲ್ಲಿ ಕುಡಿಯುತ್ತಾ, ಸಮಯ ದೂಡುತ್ತಾ ಇರುತ್ತಾನೆ. ಆದರೆ ಅಪ್ಪನ ಕಷ್ಟಕ್ಕೆ ಕರಗಿದ ನಾಯಕನಿಗೆ ಮನವರಿಕೆ ಆಗಿ, ಜೀವನದಲ್ಲಿ ಮುಂದುವರೆಯಲು ನಿರ್ಧರಿಸುತ್ತಾನೆ.   ಆದರೆ ತನ್ನ ಪ್ರೀತಿಯಿಂದಲೇ ನಾಯಕನಿಗೆ ದೊಡ್ಡ ಕಂಟಕ ಬರುತ್ತದೆ. ನಾಯಕಿಯ ಅತ್ಯಾಚಾರವಾಗಿ, ಅದು ನಾಯಕನ ಮೇಲೆಯೇ ಬರುತ್ತದೆ. ಈ ಕಳಂಕವನ್ನು ನಾಯಕ ಹೇಗೆ ತಪ್ಪಿಸಿಕೊಳ್ಳುತ್ತಾನೆ ಎಂಬುದು ಚಿತ್ರದ ಮುಖ್ಯ ಕಥಾವಸ್ತು. ಚಿತ್ರದ ಬೆಳವಣಿಗೆ : ಮೇ 2019 ರಲ್ಲಿ ಚಿತ್ರದ ಚಿತ್ರೀಕರಣ ಆರಂಭವಾಯಿತು. ಚಿತ್ರದ ಮುಹೂರ್ತ ಮೇ 18 ರಂದು ಮಲೆ ಮಹಾದೇಶ್ವರ ಬೆಟ್ಟದಲ್ಲಿ ನೇರವೇರಿತು. ಚಿತ್ರದ ಟೀಸರ್ 2020 ಫೆಬ್ರವರಿ 14 ರಂದು ಪ್ರೇಮಿಗಳ ದಿನಾಚರಣೆ ಪ್ರಯುಕ್ತ ಬಿಡುಗಡೆಯಾಯಿತು. ಟೀಸರ್ ಬಿಡುಗಡೆಗೂ ಒಂದು ದಿನ ಮುನ್ನ ರಚಿತಾ ರಾಮ್ ಸಿಗರೇಟ್ ಸೇದುತ್ತಿರುವ ದೃಶ್ಯ ವೈರಲ್ ಆಗಿತ್ತು. ಟೀಸರ್ ನಲ್ಲಿನ ರಚಿತಾ ರಾಮ್ ಲಿಪ್ ಲಾಕ್ ದೃಶ್ಯ ಹಲವರ ಹುಬ್ಬೇರಿಸಿತು.
Read More

ಏಕ್ ಲವ್ ಯಾ ಕಲಾವಿದರು ಮತ್ತು ಸಿಬ್ಬಂದಿ

ಏಕ್ ಲವ್ ಯಾ ಕ್ರೂ ಮಾಹಿತಿ

ನಿರ್ದೇಶಕ ಪ್ರೇಮ್
ಸಿನಿಮಾಟೋಗ್ರಫಿ ಮಹೇಂದ್ರ ಸಿಂಹ
ಸಂಪಾದಕ NA
ಸಂಗೀತ ಅರ್ಜುನ್ ಜನ್ಯ
ನಿರ್ಮಾಪಕ ರಕ್ಷಿತಾ
ಬಜೆಟ್ TBA
ಬಾಕ್ಸ್ ಆಫೀಸ್ TBA
ಒಟಿಟಿ ಪ್ಲಾಟ್ ಫಾರ್ಮ್ TBA
ಒಟಿಟಿ ರಿಲೀಸ್ ದಿನಾಂಕ TBA

ಏಕ್ ಲವ್ ಯಾ ವಿಮರ್ಶಕರ ವಿಮರ್ಶೆ

ಕನ್ನಡ ಫಿಲ್ಮಿಬೀಟ್
ನಾಯಕ ನಟ ರಾಣ ಮೊದಲ ಸಿನಿಮಾ ಎನಿಸುವುದಿಲ್ಲ. ಅಂದರೆ ಅಭಿನಯದಲ್ಲಿ ರಾಣ ಗೆದ್ದಿದ್ದಾರೆ. ಲವ್ವರ್ ಬಾಯ್ ಆಗಿ, ಮಗನಾಗಿ, ಪ್ರೇಮಿಯಾಗಿ, ಸತ್ಯ ಹುಡುಕುವ ನಾಯಕನಾಗಿ ರಾಣ ತಮ್ಮ ಪಾತ್ರವನ್ನು ಅಚ್ಚುಕಟ್ಟಾಗಿ ಮಾಡಿದ್ದಾರೆ.

ಏಕ್ ಲವ್ ಯಾ ಟ್ರೇಲರ್

Video Thumbnail

ಏಕ್ ಲವ್ ಯಾ ಸಿನಿಮಾ ನೋಡುಗರ ವಿಮರ್ಶೆ

  • ಕಥೆ
  • ಕ್ರಿಯೆ
  • ದಿಕ್ಕು
  • ಚಿತ್ರ ರೇಟಿಂಗ್

×
2.8 /5 Your Rating

ಏಕ್ ಲವ್ ಯಾ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+