ಯುವ ರಾಜ್‌ಕುಮಾರ್ 2ನೇ ಸಿನಿಮಾ ಎಕ್ಕ. ಈ ಸಿನಿಮಾವನ್ನು ರೋಹಿತ್ ಪದಕಿ ನಿರ್ದೇಶನ ಮಾಡುತ್ತಿದ್ದು, ಸಂಪದಾ ಹುಲಿಮನೆ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಕೆಆರ್‌ಜಿ ಸ್ಟುಡಿಯೋ, ಪಿಆರ್‌ಕೆ ಪ್ರೊಡಕ್ಷನ್ಸ್ ಹಾಗೂ ಜಯಣ್ಣ ಫಿಲ್ಮ್ಸ್ ಬ್ಯಾನರ್‌ನಲ್ಲಿ ಈ ಸಿನಿಮಾ ನಿರ್ಮಾಣವಾಗಲಿದೆ. ಚಿತ್ರದ ಪೋಸ್ಟರ್‌ನಲ್ಲಿ ಮನುಷ್ಯತ್ವ ನಮ್ಮೊಳಗಿರೋ ಮೃಗದ ಮುಖವಾಡ ಸಾಲುಯಿದೆ. ಜೊತೆಗೆ ಪೋಸ್ಟರ್ ಗಮನಿಸಿದರೆ ಯುವ ಕೈ ಮೇಲೆ 'ರತ್ನ' ಎನ್ನುವ ಹಚ್ಚೆಯಿದೆ. ಚಿತ್ರದಲ್ಲಿ ರತ್ನ ಯಾರು? ನಾಯಕ ತಾಯಿನಾ? ಅಥವಾ ಸಹೋದರಿನಾ? ಇಲ್ಲ ಪ್ರೇಯಸಿನಾ? ಆಕೆಗಾಗಿಯೇ ಈ ರಕ್ತ ಚರಿತ್ರೆ ನಡೆಯುತ್ತಾ? ಎನ್ನುವ ಕುತೂಹಲ ಮೂಡಿದೆ.
ಬಿಡುಗಡೆ: ಎಕ್ಕ ಸಿನಿಮಾ 2025ರ ಜೂನ್ 6ರಂದು ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಲಿದೆ.