ಫೈಟರ್ ಸಿನಿಮಾವನ್ನು ಉಮೇಶ್ ನೂತನ್ ನಿರ್ದೇಶನ ಮಾಡಿದ್ದಾರೆ. ಚಿತ್ರದಲ್ಲಿ ವಿನೋದ್ ಪ್ರಭಾಕರ್ ನಾಯಕನಾಗಿ ನಟಿಸಿದ್ದು, ಪಾವನಾ ಗೌಡ ಹಾಗೂ ಲೇಖಾಚಂದ್ರ ನಾಯಕಿಯರು. ಉಳಿದಂತೆ ಕುರಿ ಪ್ರತಾಪ್, ಗಿರಿಜಾ ಲೋಕೇಶ್ ಹಾಗೂ ದಕ್ಷಿಣ ಭಾರತದ ಖ್ಯಾತ ನಟ ಎಂ ಆರ್ ರಾಧಾ ಪುತ್ರಿ ನಿರೋಷಾ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಚಿತ್ರಕ್ಕೆ ಗುರುಕಿರಣ್ ಸಂಗೀತ ನೀಡಿದ್ದು, ಕೆ.ಎಸ್ ಚಂದ್ರಶೇಖರ್ ಛಾಯಾಗ್ರಹಣವಿದೆ. ಸೋಮಶೇಖರ್ ಕಟ್ಟಿಗೇನಹಳ್ಳಿ ಈ ಚಿತ್ರವನ್ನು ನಿರ್ಮಿಸಿದ್ದಾರೆ.
ಬಿಡುಗಡೆ: ಫೈಟರ್ ಸಿನಿಮಾ ಅಕ್ಟೋಬರ್ 6ರಂದು ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.