ಫೈರ್ ಫ್ಲೈ ಸಿನಿಮಾವನ್ನು ಮಾಯಾಬಜಾರ್ ಸಿನಿಮಾ ತಂಡದಲ್ಲಿ ಕೆಲಸ ಮಾಡಿದ್ದ
ವಂಶಿ ಕೃಷ್ಣ ನಿರ್ದೇಶಿಸಿ, ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಉಳಿದಂತೆ ಅಚ್ಯುತ್ ಕುಮಾರ್, ಸುಧಾರಾಣಿ, ಶೀತಲ್ ಶೆಟ್ಟಿ, ಆನಂದ್ ನೀನಾಸಂ ಚಿತ್ಕಲಾ ಬಿರಾದರ್ ಮುಂತಾದವರು ತಾರಾಗಣದಲ್ಲಿದ್ದಾರೆ. ಚರಣ್ ರಾಜ್ ಸಂಗೀತ, ಅಭಿಲಾಶ್ ಕಲತಿ ಛಾಯಾಗ್ರಹಣ ಸಿನಿಮಾಗಿದೆ. ಈ ಚಿತ್ರವನ್ನು ಶಿವರಾಜ್‌ಕುಮಾರ್ ಪುತ್ರಿ
ನಿವೇದಿತಾ ಶಿವರಾಜ್‌ಕುಮಾರ್ ಶ್ರೀ ಮುತ್ತು ಸಿನಿ ಸರ್ವಿಸ್ ಬ್ಯಾನರ್ ಅಡಿಯಲ್ಲಿ ನಿರ್ಮಿಸಿದ್ದಾರೆ.
ಬಿಡುಗಡೆ: ಫೈರ್ ಫ್ಲೈ ಸಿನಿಮಾ 2025ರ ಏಪ್ರಿಲ್ 24ರಂದು ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಲಿದೆ.