ಫುಲ್ ಮೀಲ್ಸ್ ಸಿನಿಮಾಗೆ ನಿರ್ದೇಶಕ ವಿನಾಯಕ ವಿನು ಆಕ್ಷನ್ ಕಟ್ ಹೇಳಿದ್ದಾರೆ. ಸಂಕಷ್ಟಹರ ಗಣಪತಿ ಮತ್ತು ಫ್ಯಾಮಿಲಿ ಪ್ಯಾಕ್ ಸಿನಿಮಾ ಖ್ಯಾತಿಯ ಲಿಖಿತ್ ಶೆಟ್ಟಿ ಈ ಸಿನಿಮಾದಲ್ಲಿ ನಾಯಕನಾಗಿ ನಟಿಸುವುದರ ಜೊತೆಗೆ ತಾವೇ ನಿರ್ಮಿಸಿದ್ದಾರೆ. ದಿಯಾ ಖ್ಯಾತಿಯ ಖುಷಿ ರವಿ ಮತ್ತು ತೇಜಸ್ವಿನಿ ಚಿತ್ರದ ನಾಯಕಿಯರಾಗಿ ನಟಿಸುತ್ತಿದ್ದಾರೆ. ರಂಗಾಯಣ ರಘು, ಸಾಧುಕೋಕಿಲ, ಚಂದ್ರಕಲಾ ಮೋಹನ್, ರಮೇಶ್ ಪಂಡಿತ್, ವಿಜಯ್ ಚೆಂಡೂರ್, ಗಣೇಶ್ ರಾವ್ ಸೇರಿದಂತೆ ಅನೇಕರು ಈ ಸಿನಿಮಾದಲ್ಲಿ ನಟಿಸಿದ್ದಾರೆ.
ಮದುವೆ ಫೋಟೋ ತೆಗೆಯಲು ಬಂದ ಛಾಯಾಗ್ರಾಹಕನಿಗೆ ಮದುಮಗಳ ಮೇಲೆಯೇ ಪ್ರೀತಿಯಾದರೆ ಏನಾಗುತ್ತದೆ? ಎಂಬುದು ಈ ಚಿತ್ರದಲ್ಲಿ ತಿಳಿಯುತ್ತದೆ. ಫುಲ್ ಮೀಲ್ಸ್ ಚಿತ್ರಕ್ಕೆ ಗುರುಕಿರಣ್ ಸಂಗೀತ ನೀಡಿದ್ದು, ಮನೋಹರ್ ಜೋಶಿಯವರ ಛಾಯಾಗ್ರಹಣವಿದೆ.