ಗದಾಯುದ್ಧ ಸಿನಿಮಾವನ್ನು ಶ್ರೀವತ್ಸ ರಾವ್ ನಿರ್ದೇಶನ ಮಾಡಿದ್ದಾರೆ. ಚಿತ್ರದಲ್ಲಿ ಸುಮಿತ್ ಶಿರಗುರ್‌ಕರ್ ನಾಯಕನಾಗಿ ಮತ್ತು ಧನ್ಯಾ ಪಾಟೀಲ್ ನಾಯಕಿಯಾಗಿ ನಟಿಸಿದ್ದಾರೆ. ಉಳಿದಂತೆ ಸಾಧು ಕೋಕಿಲ, ಸ್ಪರ್ಶ ರೇಖಾ, ಅಯ್ಯಪ್ಪ ಪಿ ಶರ್ಮ, ಡ್ಯಾನಿ ಕುಟ್ಟಪ್ಪ, ಶರತ್ ಲೋಹಿತಾಶ್ವ, ಅರವಿಂದ್ ರಾವ್, ಐಶ್ವರ್ಯ ಸಿಂಧೋಗಿ ಮುಂತಾದವರು ನಟಿಸಿದ್ದಾರೆ. ಬೆಳಗಾವಿ ಮೂಲಕದ ನಿತಿನ್ ಶಿರಗುರ್‌ಕರ್ ಸಿನಿಮಾವನ್ನು ನಿರ್ಮಿಸಿದ್ದಾರೆ. ಸಾಲೋಮನ್ ಸಂಗೀತ ಹಾಗೂ ಸುರೇಶ್ ಬಾಬು ಅವರ ಛಾಯಾಗ್ರಹಣ ಸಿನಿಮಾಗೆ ಇದೆ.