ಅನಂತನಾಗ್ ಮತ್ತು ವಿನಯಾ ಪ್ರಸಾದ್ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ಈ ಚಿತ್ರವನ್ನು ಫಣಿ ರಾಮಚಂದ್ರ ನಿರ್ದೇಶಿಸಿದ್ದರು.ದೊಡ್ಡ ರಂಗೇಗೌಡ, ಗೀತಪ್ರಿಯ, ರುದ್ರಮೂರ್ತಿ ಶಾಸ್ತ್ರಿಯವರ ಸಾಹಿತ್ಯವಿದ್ದ ಈ ಚಿತ್ರಕ್ಕೆ ರಾಜನ್- ನಾಗೇಂದ್ರ ಸಂಗೀತ ನೀಡಿದ್ದರು.
ಚಿತ್ರದ ಕತೆ ಒಂದು ವಠಾರದಲ್ಲಿ ನೆಡೆಯುತ್ತದೆ. ವಾಚಾಳಿ ಯುವಕನಾಗಿ ಗಣೇಶ್ ನಟಿಸಿದ್ದರೆ, ವಿನಯಾ ಪ್ರಸಾದ್ ಗಾಯಕಿಯಾಗಿ ನಟಿಸಿದ್ದಾರೆ. ವಠಾರದ ಮಾಲೀಕನಾಗಿ ಮುಖ್ಯಮಂತ್ರಿ ಚಂದ್ರು ಹಾಸ್ಯರಸವನ್ನು ಹರಿಸುತ್ತಾರೆ. ಗಣೇಶ್ ತಾನು ಮುಖವೂ ನೋಡಿರದ ಶೃತಿ ಎಂಬ ಗಾಯಕಿಯ ಪ್ರೀತಿಯಲ್ಲಿ ಬೀಳುತ್ತಾನೆ. ನಂತರ ಅವನು ಪ್ರೀತಿಸುವ ಗಾಯಕಿ ತಾನು ದಿನ ಜಗಳ ಕಾಯುವ ವಠಾರದ ಮನೆ ಮಾಲೀಕನ ಮಗಳೆಂದು ಗೊತ್ತಾಗುತ್ತದೆ.