ರಾಜ ಬಿ ಶೆಟ್ಟಿ ನಿರ್ಮಿಸಿ ಮತ್ತು ನಾಯಕನಾಗಿ ನಟಿಸಿರುವ ಚಿತ್ರ ಗರುಡ ಗಮನ ವೃಷಭ ವಾಹನ. ರಿಷಭ್ ಶೆಟ್ಟಿ ಚಿತ್ರದ ಇನ್ನೋರ್ವ ನಾಯಕನಾಗಿ ಕಾಣಿಸಿಕೊಂಡಿದ್ದಾರೆ. ಮಿಧುನ್ ಮುಕುಂದನ್ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ಈ ಚಿತ್ರ ಜೂನ್ 2020 ರಲ್ಲಿ ತೆರೆಗೆ ಬರಲಿದೆ.ರಾಜ್ ಬಿಟ ಶೆಟ್ಟಿಯವರ ಲೈಟರ್ ಬುದ್ಧ ಫಿಲಂಸ್ ಚಿತ್ರ ನಿರ್ಮಾಣ ಮಾಡುತ್ತಿದ್ದು ರವಿ ರೈ ಮತ್ತು ವಚನ್ ಶೆಟ್ಟಿ ಕೂಡ ಬಂಡವಾಳ ಹೂಡಿದ್ದಾರೆ.
ಇದೊಂದು ಮಂಗಳೂರು ಹಿನ್ನಲೆಯಲ್ಲಿ ನೆಡೆಯುವ ಗ್ಯಾಂಗ್‌ಸ್ಟರ್ ಚಿತ್ರ. ಚಿತ್ರಕ್ಕೆ ಮೊದಲು ಹರಿಹರ ಎಂದು ಹೆಸರಿಡಲು ಆಲೋಚಿಸಿದ್ದ ಚಿತ್ರತಂಡ ನಂತರ `ಗರುಡ ಗಮನ ವೃಷಭ ವಾಹನ' ಹೆಸರಿಟ್ಟಿತು. ಗರುಡಗಮನ ಎಂದರೆ ವಿಷ್ಣುವಿನ ನಿಯಂತ್ರಣ ಶಕ್ತಿಯ ಸಂಕೇತವಾದರೆ, ವೃಷಭವಾಹನ ಎಂದರೆ ಶಿವನ ಕ್ರೋಧದ ರೂಪ. ಇವರೆಡು ಹೆಸರುಗಳು ಚಿತ್ರದ ಮುಖ್ಯ ನಾಯಕರಾದ ರಿಷಭ್ ಮತ್ತು ರಾಜ್ ಪಾತ್ರಗಳ ಸ್ವಭಾವದ ಸಂಕೇತಗಳಾಗಿವೆ. ಅರ್ಭಟಿಸುವ ರೆಬೆಲ್ ಶಿವನ ಪಾತ್ರದಲ್ಲಿ ರಾಜ್ ಬಿ ಶೆಟ್ಟಿ ನಟಿಸಿದ್ದರೆ, ಸಂಯಮದ ಸಂಕೇತ ಹರಿಯಾಗಿ ರಿಷಭ್ ಶೆಟ್ಟಿ ನಿಯಂತ್ರಿಸುವ ಪೋಲಿಸ್ ಪಾತ್ರದಲ್ಲಿ ನಟಿಸಿದ್ದಾರೆ.