ಗೀತಾ ಕಥೆ

  ಕಥೆ - ಗೋಕಾಕ್ ಚಳುವಳಿ ಹಿನ್ನಲೆಯಲ್ಲಿ ಮೂಡಿಬಂದ ಈ ಚಿತ್ರ ಆಕಾಶ್ ಮತ್ತು ಗೀತಾಳ ಪ್ರೇಮಕಥೆಯನ್ನು ಚಿತ್ರ ಹೇಳುತ್ತದೆ. ಹೇಗೆ ಅವರು ತಮ್ಮ ಜೀವನದ ಭಿನ್ನ ಭಿನ್ನ ಸಂದರ್ಭಗಳಲ್ಲಿ ಪರಸ್ಪರ ಎದುರಾಗುತ್ತಾರೆ ಎಂಬುದನ್ನು ಚಿತ್ರ ತೋರಿಸುತ್ತದೆ. ಹಾಗೇ ತನ್ನ ತಂದೆ ತಾಯಿ ಹೇಗೆ ದೂರಾದರೂ ಎಂಬ ಸತ್ಯವನ್ನು ಅರಸಿ ಹೊರಟಾಗ ಕನ್ನಡ ಹೋರಾಟದ ಕಥೆ ತೆರೆದುಕೊಳ್ಳುತ್ತದೆ.

  ಹಿನ್ನಲೆ - ಗೋಲ್ಡನ್ ಸ್ಟಾರ್ ಗಣೇಶ್ ನಾಯಕನಾಗಿ ನಟಿಸುತ್ತಿರುವ `ಗೀತಾ' ಚಿತ್ರವನ್ನು ನವ ನಿರ್ದೇಶಕ ವಿಜಯ ನಾಗೇಂದ್ರ ನಿರ್ದೇಶಿಸಿದ್ದಾರೆ. ಚಿತ್ರದಲ್ಲಿ ಶಾನ್ವಿ ಶ್ರೀವಾತ್ಸವ್,ಪಾರ್ವತಿ ಅರುಣ,ಪ್ರಯಾಗಾ ಮಾರ್ಟಿನ್ ನಾಯಕಿಯರಾಗಿ ನಟಿಸಿದ್ದಾರೆ.ಚಿತ್ರದ ಟೀಸರ್ ಗಣೇಶ್ ಜನ್ಮದಿನದ ಪ್ರಯುಕ್ತ ಜುಲೈ 2, 2019 ರಂದು ಬಿಡುಗಡೆಯಾಯಿತು.

   ಈ ಚಿತ್ರವನ್ನು ನಿರ್ಮಾಪಕ ಸೈಯದ್ ಸಲಾಂ ಸಹಯೋಗದಲ್ಲಿ ಗಣೇಶ್‌ರ ಹೋಮ್ ಬ್ಯಾನರ್ `ಗೋಲ್ಡನ ಮೂವೀಸ್' ಮೂಲಕ ನಿರ್ಮಸಿದ್ದಾರೆ.1981 ರಲ್ಲಿ ಇದೇ ಹೆಸರಿನ ಚಿತ್ರ ಶಂಕರನಾಗ್‌ರವರ ನಾಯಕತ್ವದಲ್ಲಿ ತೆರೆಕಂಡಿತ್ತು.ಗಣೇಶ್ ಕಾಲೇಜು ವಿಧ್ಯಾರ್ಥಿಯಾಗಿ ನಟಿಸುತ್ತಿರುವ `ಗೀತಾ' ಚಿತ್ರದ ಕಥೆ ಕೂಡ ಸುಮಾರು 1980 ದಶಕದ ಆಸುಪಾಸು ನೆಡೆಯುತ್ತದೆ.

  ಚಿತ್ರದ ಮೊದಲ ಹಂತದ ಶೂಟಿಂಗ್ ಕೊಲ್ಕತ್ತಾ ಮತ್ತು ಮನಾಲಿಯಲ್ಲಿ ನಡೆಯಿತು,ಎರಡನೇ ಶೆಡ್ಯೂಲ್‌ನ್ನು ಮೈಸೂರಿನ ಅರಮನೆ, ಬೃಂದಾವನ ಉದ್ಯಾನವನ, ಜ್ಞಾನಭಾರತಿ ಆಡಿಟೋರಿಯಂ ಮುಂತಾದ ಸ್ಥಳಗಳಲ್ಲಿ ಚಿತ್ರೀಕರಿಸಿದರು

  `ರಾಜಕುಮಾರ',` Mr. & Mrs ರಾಮಾಚಾರಿ' ಚಿತ್ರಗಳಲ್ಲಿ ಸಂತೋಷ್ ಆನಂದರಾಮ್‌ರವರ ಸಹಾಯಕ ನಿರ್ದೇಶಕರಾಗಿದ್ದ ವಿಜಯ ನಾಗೇಂದ್ರ ಈ ಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕರಾಗಿ ಪಾದಾರ್ಪಣೆ ಮಾಡಿದ್ದಾರೆ.ಚಿತ್ರದ ಒಂದು ಹಾಡನ್ನು ಪವರಸ್ಟಾರ್ ಪುನೀತ್ ರಾಜಕುಮಾರ್ ಹಾಡಿದ್ದಾರೆ.
  **Note:Hey! Would you like to share the story of the movie ಗೀತಾ with us? Please send it to us (popcorn@oneindia.co.in).
   
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X