ದೇವದಾಸಿ ಪದ್ಧತಿಯ ಅನಿಷ್ಟವನ್ನು ಈ ಚಿತ್ರ ಹೇಳುತ್ತದೆ. ಚಂದ್ರ ಎಂಬ ದೇವದಾಸಿಯ ಪುತ್ರಿ, ಉನ್ನತ ಶಿಕ್ಷಣ ಪಡೆದು ಈ ಪದ್ಧತಿಯ ಸಂಕೋಲೆಗೆ ಸಿಲುಕಬಾರದೆಂದು ಪ್ರಯತ್ನಿಸುತ್ತಾಳೆ. ಆದರೆ ಅವಳು ಪ್ರೀತಿಸಿದವನು ಅವಳನ್ನು ಶಂಕಿಸಿ, ಬೇರೆಯವಳನ್ನು ಮದುವೆ ಆಗುತ್ತಾನೆ. ನಂತರ ಅನಿವಾರ್ಯವಾಗಿ ಗೆಜ್ಜೆ ಪೂಜೆ ಮಾಡಿ ದೇವದಾಸಿಯಾಗಲು ಮನಸ್ಸಾಗದೇ ಆತ್ಮಹತ್ಯೆ ಮಾಡಿಕೊಳ್ಳುತ್ತಾಳೆ.