ಗಿಣಿ ಹೇಳಿದ ಕಥೆ (2019)(U/A)
ಗಿಣಿ ಹೇಳಿದ ಕಥೆ ಕಥೆ
ಬುದ್ಧ ಚಿತ್ರಾಲಯ ಅಡಿಯಲ್ಲಿ ನಿರ್ಮಾಣವಾಗಿರುವ ದೇವ ರಂಗಭೂಮಿ ನಾಯಕನಾಗಿ ನಟಿಸುತ್ತಿರುವ `ಗಿಣಿ ಹೇಳಿದ ಕಥೆ' 2019 ಜನೇವರಿ 11 ರಂದು ಬಿಡುಗಡೆಯಾಗುತ್ತಿದೆ. ನಾಗರಾಜ ಉಪ್ಪುಂದ ನಿರ್ದೇಶನವಿರುವ ಈ ಚಿತ್ರದಲ್ಲಿ ಗೀತಾಂಜಲಿ ನಾಯಕಿಯಾಗಿ ನಟಿಸಿದ್ದಾರೆ.ಮಾಲತೇಶ್,ವಿನಯ್ ನಿನಾಸಂ, ಫೈರೋಜ್ ಹಾಗೂ ನೀತು ಮುಂತಾದವರು ಫೋಷಕ ಪಾತ್ರಗಳಲ್ಲಿ ನಟಿಸಿದ್ದಾರೆ.
ಚಿತ್ರಕ್ಕೆ ಹಿತನ್ ಹಾಸನ್ ಸಾಹಿತ್ಯ ಮತ್ತು ಸಂಗೀತ ನೀಡಿದ್ದು , ಚಿತ್ರದ ಹಾಡನ್ನು ಧ್ರುವ ಸರ್ಜಾ ಬಿಡುಗಡೆ ಮಾಡಿದರು. ಲಹರಿ ಮ್ಯೂಸಿಕ್ ಚಿತ್ರದ ಆಡಿಯೋ ಹಕ್ಕುಗಳನ್ನು ಖರೀದಿಸಿದೆ.
ಚಿತ್ರದಲ್ಲಿ ಸುಮಾರು 84 ರಂಗಭೂಮಿ ಕಲಾವಿದರು ಅಭಿನಯಿಸಿರುವುದು ವಿಶೇಷ.
ಕಥೆ
ಒಬ್ಬ ಪಯಣಿಗ ಮತ್ತು ಗಣೇಶ್ ಎಂಬ ಕ್ಯಾಬ್ ಚಾಲಕನ ನಡುವಿನ ಸಂಬಾಷಣೆ ಮೂಲಕ ಕಥೆ ಆರಂಭವಾಗುತ್ತದೆ. ಲೋಕಾಭಿರಾಮವಾಗಿ ಮಾತನಾಡುವ ಚಾಲಕ ಎಲ್ಲ ಸಂಗತಿಗಳ ಬಗ್ಗೆ ತನ್ನದೇ ಆದ ವಿಶಿಷ್ಟ ಅಭಿಪ್ರಾಯ ಹೊಂದಿರುತ್ತಾನೆ. ಸಹಪಯಣಿಗ ನಿನ್ನ ಕಥೆಯೆನೇಂದು ಕೇಳಲು ಪ್ರಯಾಣಿಕ ತನ್ನ ಪ್ರೇಮಕಥೆಗೆ ಜಾರುತ್ತಾನೆ.
ತನಗೆ ಆಗಾಗ ಬಡ್ಡಿ ನೀಡುವ ಮಹಿಳೆಯ ಮಗಳು ಶಿಕ್ಷಕಿ ಅಮೃತಾ. ಅಮ್ಮು ಹೂವಿನಂತೆ ಕೋಮಲ ಮಂಜಿನಂತೆ ಶೀತಲ.ಈ ಗುಂಗುರು ಕೂದಲಿನ ಟೀಚರ್ ಅಮ್ಮು ಮೇಲೆ ನಾಯಕನಿಗೆ ಪ್ರೀತಿ ಹುಟ್ಟುತ್ತದೆ. ಹಠ ಮತ್ತು ಚಟ ಎರಡರಲ್ಲೂ ಮುಂದಿರುವ ನಾಯಕ ಒಂದು ಆರು ತಿಂಗಳು ಹಿಂದೆ ಬಿದ್ದು ಹೇಗೋ ಹುಡಗಿನ ಓಲಿಸಿಕೊಳ್ಳುತ್ತಾನೆ.ಆದರೆ ಇವನದು ವಿಶಿಷ್ಟ ಪ್ರೇಮ.ಮದುವೆ ಆಗೋವರೆಗೂ ಹುಡಗೀನ ಸ್ಪರ್ಶ ಕೂಡ ಮಾಡೋದಿಲ್ಲ ಎನ್ನುವ ಪಾಲಿಸಿ.ಈ ಸುಂದರ ಪ್ರೇಮ ಪಯಣದಲ್ಲಿ ಸಾಗುತ್ತಿದ್ದ ಗಣೇಶ್‌ನ ಬಾಳಲ್ಲಿ ಗಿಣಿಯಿಂದ ಹೊಸ ಕಥೆ ಹೇಳುತ್ತದೆ. ಆ ಕಥೆಯೇನು ಎಂಬುದು ಚಿತ್ರದ ಮೂಲಕಥೆ. ರಸ್ತೆ ದಾಟಿದಂತೆ ನೆನಪುಗಳನ್ನು ದಾಟಲು ಸಾಧ್ಯವೇ? ಎಂಬ ಚಿಂತನೆಗೆ ಚಿತ್ರ ಕರೆದೊಯ್ಯುತ್ತದೆ.