ಸೋಮನಾಥ್ ಪಾಟೀಲ್ ನಿರ್ದೇಶನದ ಹಾರರ್ ಚಿತ್ರ `ಹೌಲಾ ಹೌಲಾ' ದಲ್ಲಿ ಪೃಥ್ವಿ ಪಾಟೀಲ್ ,ಆರತಿ ಕುಲಕರ್ಣಿ, ಅಮಿತ್, ಹನುಮಂತೇ ಗೌಡ ಮುಂತಾದವರು ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಡಾ. ರಮೇಶ್ ಚೌಧರಿ ಮತ್ತು ಸುಶೀಲಾ ಪಾಟೀಲ್ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದರೆ, ಕಿಲ್ಲಿಂಗ್ ವೀರಪ್ಪನ್ ಚಿತ್ರಕ್ಕೆ ಹಿನ್ನಲೆ ಸಂಗೀತ ನೀಡಿದ್ದ ಸ್ಯಾಂಡಿ ಈ ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡಿದ್ದಾರೆ.
ಚಿತ್ರದಲ್ಲಿ ಸಾಹಸಸಿಂಹ ವಿಷ್ಣುವರ್ಧನ್ ರ ಚಿತ್ರಗಳ ಉಲ್ಲೇಕ ಚಿತ್ರದಲ್ಲಿ ಆಗಾಗ ಕಂಡುಬರುತ್ತದೆ. ಡಾ. ವಿಷ್ಣುವರ್ಧನ್ ಅಭಿಮಾನಯೊಬ್ಬಳ ಕಥೆಯನ್ನು ಹೊಂದಿರುವ ಈ ಚಿತ್ರ ವಿಧ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಳ್ಳಬಾರದೆಂಬ ಸಂದೇಶ ಸಾರುತ್ತದೆ.