ಓಂ ಪ್ರಕಾಶ್ ರಾವ್ ನಿರ್ದೇಶನದ ಈ ಚಿತ್ರದಲ್ಲಿ ಕಿಚ್ಚ ಸುದೀಪ್ ಮತ್ತು ರೇಖಾ ವೇದವ್ಯಾಸ್ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ. ತಮಿಳಿನ ಸೇತು ಚಿತ್ರದ ರಿಮೇಕ್ ಆದ ಈ ಚಿತ್ರಕ್ಕೆ ರಾಜೇಶ್ ರಾಮನಾಥನ್ ಸಂಗೀತ ನೀಡಿದರು,. ಚಿತ್ರದ ಗೀತೆಗಳು ಗಮನ ಸೆಳೆದವು. ಇದು ಕಿಚ್ಚ ಸುದೀಪ್ ರ ಮೊದಲ ಹಿಟ್ ಚಿತ್ರ.
ಕಾಲೇಜಿನ ಒಬ್ಬ ರಫ್ ಆಂಡ್ ಟಫ್ ಯುವಕ ಒಬ್ಬ ಸಿಂಪಲ್ ಹುಡುಗಿ ಪ್ರೀತಿಯಲ್ಲಿ ಬೀಳುತ್ತಾನೆ. ನಂತರ ಅವಳು ತನ್ನ ಪ್ರೀತಿಯನ್ನು ಒಪ್ಪಿದ ಕೆಲ ಸಮಯದಲ್ಲಿ ಅವನು ತನ್ನ ಹಳೆಯ ನೆನಪನ್ನೇ ಕಳೆದುಕೊಳ್ಳುತ್ತಾನೆ. ಅವನಿಗೆ ಮರಳಿ ನೆನಪು ಬರುವಷ್ಟರಲ್ಲಿ ಅವನು ಪ್ರೀತಿಸಿದ ಹುಡುಗಿ ಆತ್ಮಹತ್ಯೆ ಮಾಡಿಕೊಂಡಿರುತ್ತಾಳೆ.