ಇಬ್ಬನಿ ತಬ್ಬಿದ ಇಳೆಯಲಿ ಸಿನಿಮಾವನ್ನು ಚಂದ್ರಜಿತ್ ಬೆಳ್ಳಿಯಪ್ಪ ನಿರ್ದೇಶನ ಮಾಡಿದ್ದಾರೆ. ಸಿನಿಮಾದಲ್ಲಿ ನಮ್ಮನೆ ಯುವರಾಣಿ ಖ್ಯಾತಿಯ ಅಂಕಿತಾ ಅಮರ್ ನಾಯಕಿಯಾಗಿ ಹಾಗೂ ವಿಹಾನ್ ಗೌಡ ನಾಯಕನಾಗಿ ಅಬಿನಯಿಸಿದ್ದಾರೆ. ಉಳಿದಂತೆ ಗಿರಿಜಾ ಶೆಟ್ಟರ್, ಮಯೂರಿ ನಟರಾಜ, ಶಂಕರ್ ಮೂರ್ತಿ ಎಸ್.ಆರ್ ಮುಂತಾದವರು ತಾರಾಗಣದಲ್ಲಿದ್ದಾರೆ. ಗಗನ್ ಬಡೇರಿಯಾ ಸಂಗೀತ, ಶ್ರೀವತ್ಸನ್ ಸೆಲ್ವರಾಜನ್ ಛಾಯಾಗ್ರಹಣ ಹಾಗೂ ರಕ್ಷಿತ್ ಕಾಫು ಸಂಕಲನ ಚಿತ್ರಕ್ಕಿದೆ. ಇಬ್ಬನಿ ತಬ್ಬಿದ ಇಳೆಯಲಿ ಸಿನಿಮಾವನ್ನು ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ನಿರ್ಮಾಣ ಮಾಡಿದ್ದಾರೆ.
ಸಿನಿಮಾ ಕಥೆ: ಈಗಾಗಲೇ ಟೀಸರ್, ಟ್ರೈಲರ್ ನೋಡಿರುವವರಿಗೆ ಈ ಸಿನಿಮಾ ಒಬ್ಬ ನಾಯಕ, ಇಬ್ಬರು ನಾಯಕಿಯರ ಕಥೆ ಇರಬಹುದು ಅನ್ನೋ ಅನುಮಾನ ಮೂಡಿತ್ತು. ಅದು ನಿಜಕ್ಕೂ ಸತ್ಯ. ಸಿದ್ಧಾರ್ಥ್ (ವಿಹಾನ್) ಕೊಟ್ಯಾಧಿಪತಿಯ ಮಗ. ಅನಾಹಿತಾ (ಅಂಕಿತಾ ಅಮರ್) ಬೆಂಗಾಲಿ ಹುಡುಗಿ. ಇವರಿಬ್ಬರ ಪ್ರೀತಿಯಲ್ಲಿ ಬರುವ ರಾಧೆ (ಮಯೂರಿ ನಟರಾಜ್). ಇಡೀ ಸಿನಿಮಾ ಈ ಮೂರು ಪಾತ್ರಗಳನ್ನೇ ಪ್ರಧಾನವಾಗಿಟ್ಟುಕೊಂಡು ಮುಂದಕ್ಕೆ ಸಾಗುತ್ತೆ. 7 ವರ್ಷಗಳಿಂದ ಬೇರೆಯಾಗಿರುವ ಸಿದ್ಧಾರ್ಥ್ ಹಾಗೂ ಅಂಕಿತಾ ಅಮರ್ ಮಧ್ಯೆ ರಾಧೆ ಬಂದಿದ್ದಾಳೆ. ಸಿದ್ಧಾರ್ಥ್‌ಗೆ ಅನಾಹಿತ ಪ್ರೀತಿ ಸಿಗುತ್ತಾ? ರಾಧೆಗೆ ಸಿದ್ಧಾರ್ಥ್ ಸಿಗುತ್ತಾನಾ? ಅನ್ನೋದೇ 'ಇಬ್ಬನಿ ತಬ್ಬಿದ ಇಳೆಯಲಿ' ಸಿನಿಮಾದ ಒಂದೆಳೆ ಕಥೆ.
ಬಿಡುಗಡೆ: ಇಬ್ಬನಿ ತಬ್ಬಿದ ಇಳೆಯಲಿ ಸಿನಿಮಾ 2024ರ ಸೆಪ್ಟಂಬರ್ 5ರಂದು ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಯಿತು.