X
ಕನ್ನಡ » ಚಲಚಿತ್ರಗಳು » ಇಬ್ಬನಿ ತಬ್ಬಿದ ಇಳೆಯಲಿ
ಇಬ್ಬನಿ ತಬ್ಬಿದ ಇಳೆಯಲಿ

ಇಬ್ಬನಿ ತಬ್ಬಿದ ಇಳೆಯಲಿ

Drama | 05 Sep 2024 | U/A |
Kannada

2.5 /5 Users

0 /5 Filmibeat

ಇಬ್ಬನಿ ತಬ್ಬಿದ ಇಳೆಯಲಿ ಕಥೆ

ಇಬ್ಬನಿ ತಬ್ಬಿದ ಇಳೆಯಲಿ ಸಿನಿಮಾವನ್ನು ಚಂದ್ರಜಿತ್ ಬೆಳ್ಳಿಯಪ್ಪ ನಿರ್ದೇಶನ ಮಾಡಿದ್ದಾರೆ. ಸಿನಿಮಾದಲ್ಲಿ ನಮ್ಮನೆ ಯುವರಾಣಿ ಖ್ಯಾತಿಯ ಅಂಕಿತಾ ಅಮರ್ ನಾಯಕಿಯಾಗಿ ಹಾಗೂ ವಿಹಾನ್ ಗೌಡ ನಾಯಕನಾಗಿ ಅಬಿನಯಿಸಿದ್ದಾರೆ. ಉಳಿದಂತೆ ಗಿರಿಜಾ ಶೆಟ್ಟರ್, ಮಯೂರಿ ನಟರಾಜ, ಶಂಕರ್ ಮೂರ್ತಿ  ಎಸ್.ಆರ್ ಮುಂತಾದವರು ತಾರಾಗಣದಲ್ಲಿದ್ದಾರೆ. ಗಗನ್ ಬಡೇರಿಯಾ ಸಂಗೀತ, ಶ್ರೀವತ್ಸನ್ ಸೆಲ್ವರಾಜನ್ ಛಾಯಾಗ್ರಹಣ ಹಾಗೂ ರಕ್ಷಿತ್ ಕಾಫು ಸಂಕಲನ ಚಿತ್ರಕ್ಕಿದೆ. ಇಬ್ಬನಿ ತಬ್ಬಿದ ಇಳೆಯಲಿ ಸಿನಿಮಾವನ್ನು ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ನಿರ್ಮಾಣ ಮಾಡಿದ್ದಾರೆ. ಸಿನಿಮಾ   ಕಥೆ: ಈಗಾಗಲೇ ಟೀಸರ್, ಟ್ರೈಲರ್ ನೋಡಿರುವವರಿಗೆ ಈ ಸಿನಿಮಾ ಒಬ್ಬ ನಾಯಕ, ಇಬ್ಬರು ನಾಯಕಿಯರ ಕಥೆ ಇರಬಹುದು ಅನ್ನೋ ಅನುಮಾನ ಮೂಡಿತ್ತು. ಅದು ನಿಜಕ್ಕೂ ಸತ್ಯ. ಸಿದ್ಧಾರ್ಥ್ (ವಿಹಾನ್) ಕೊಟ್ಯಾಧಿಪತಿಯ ಮಗ. ಅನಾಹಿತಾ (ಅಂಕಿತಾ ಅಮರ್) ಬೆಂಗಾಲಿ ಹುಡುಗಿ. ಇವರಿಬ್ಬರ ಪ್ರೀತಿಯಲ್ಲಿ ಬರುವ ರಾಧೆ (ಮಯೂರಿ ನಟರಾಜ್). ಇಡೀ ಸಿನಿಮಾ ಈ ಮೂರು ಪಾತ್ರಗಳನ್ನೇ ಪ್ರಧಾನವಾಗಿಟ್ಟುಕೊಂಡು ಮುಂದಕ್ಕೆ ಸಾಗುತ್ತೆ. 7 ವರ್ಷಗಳಿಂದ ಬೇರೆಯಾಗಿರುವ ಸಿದ್ಧಾರ್ಥ್ ಹಾಗೂ ಅಂಕಿತಾ ಅಮರ್ ಮಧ್ಯೆ ರಾಧೆ ಬಂದಿದ್ದಾಳೆ. ಸಿದ್ಧಾರ್ಥ್‌ಗೆ ಅನಾಹಿತ ಪ್ರೀತಿ ಸಿಗುತ್ತಾ? ರಾಧೆಗೆ ಸಿದ್ಧಾರ್ಥ್ ಸಿಗುತ್ತಾನಾ? ಅನ್ನೋದೇ 'ಇಬ್ಬನಿ ತಬ್ಬಿದ ಇಳೆಯಲಿ' ಸಿನಿಮಾದ ಒಂದೆಳೆ ಕಥೆ.  ಬಿಡುಗಡೆ: ಇಬ್ಬನಿ ತಬ್ಬಿದ ಇಳೆಯಲಿ ಸಿನಿಮಾ 2024ರ ಸೆಪ್ಟಂಬರ್ 5ರಂದು ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಯಿತು.
Read More

ಇಬ್ಬನಿ ತಬ್ಬಿದ ಇಳೆಯಲಿ ಕಲಾವಿದರು ಮತ್ತು ಸಿಬ್ಬಂದಿ

ಇಬ್ಬನಿ ತಬ್ಬಿದ ಇಳೆಯಲಿ ಕ್ರೂ ಮಾಹಿತಿ

ನಿರ್ದೇಶಕ ಚಂದ್ರಜಿತ್ ಬೆಳ್ಳಿಯಪ್ಪ
ಸಿನಿಮಾಟೋಗ್ರಫಿ NA
ಸಂಪಾದಕ NA
ಸಂಗೀತ ಗಗನ್ ಬಡೇರಿಯಾ
ನಿರ್ಮಾಪಕ ರಕ್ಷಿತ್ ಶೆಟ್ಟಿ
ಬಜೆಟ್ TBA
ಬಾಕ್ಸ್ ಆಫೀಸ್ TBA
ಒಟಿಟಿ ಪ್ಲಾಟ್ ಫಾರ್ಮ್ TBA
ಒಟಿಟಿ ರಿಲೀಸ್ ದಿನಾಂಕ TBA

ಇಬ್ಬನಿ ತಬ್ಬಿದ ಇಳೆಯಲಿ ವಿಮರ್ಶಕರ ವಿಮರ್ಶೆ

kannada.filmibeat.com
'ಇಬ್ಬನಿ ತಬ್ಬಿದ ಇಳೆಯಲಿ'ಯಲ್ಲಿ ನಟಿಸಿದ ವಿಹಾನ್, ಅಂಕಿತಾ ಅಮರ್ ಹಾಗೂ ಮಯೂರಿ ನಟರಾಜ್ ಪಾತ್ರಗಳು ಸಿನಿಮಾ ನೋಡಿ ಹೊರಬಂದ ಮೇಲೂ ಕಾಡುತ್ತವೆ. ವಿಹಾನ್ ಅಭಿನಯದಲ್ಲಿ ಪ್ರಬುದ್ಧತೆ ಕಾಣುತ್ತೆ. ಹಿಂದಿನ ಸಿನಿಮಾಗಳನ್ನು ಮರೆತು ನೋಡುವಂತೆ ಮಾಡುತ್ತೆ. ನಟಿ ಮಯೂರಿ ನಟರಾಜ್‌ಗೆ ಸಿಕ್ಕಿದ್ದು ಚಿಕ್ಕ ಸ್ಕ್ರೀನ್ ಸ್ಪೇಸ್. ಆದರೆ, ತಮ್ಮ ಪಾತ್ರವನ್ನು ತಿಂದು ಹಾಕಿದ್ದಾರೆ. ಇನ್ನು ಬೆಂಗಾಲಿ ಹುಡುಗಿಯಾಗಿ ಅಂಕಿತಾ ಅಮರ್ ಪ್ರೇಕ್ಷಕರ ಫೇವರಿಟ್ ಆಗಿಬಿಟ್ಟಿದ್ದಾರೆ.

ಇಬ್ಬನಿ ತಬ್ಬಿದ ಇಳೆಯಲಿ ಟ್ರೇಲರ್

Video Thumbnail

ಇಬ್ಬನಿ ತಬ್ಬಿದ ಇಳೆಯಲಿ ವೀಡಿಯೊಗಳು

ಇಬ್ಬನಿ ತಬ್ಬಿದ ಇಳೆಯಲಿ ಸಿನಿಮಾ ನೋಡುಗರ ವಿಮರ್ಶೆ

  • ಕಥೆ
  • ಕ್ರಿಯೆ
  • ದಿಕ್ಕು
  • ಚಿತ್ರ ರೇಟಿಂಗ್

×
2.5 /5 Your Rating

ಇಬ್ಬನಿ ತಬ್ಬಿದ ಇಳೆಯಲಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+