X
ಇಕ್ಕಟ್
Comedy | Drama | 21 Jul 2021 |
Kannada

ಇಕ್ಕಟ್ ಕಥೆ

ಈಶಮ್ ಖಾನ್ ಮತ್ತು ಹಶೀನ್ ಖಾನ್ ನಿರ್ದೇಶನದಲ್ಲಿ ಮೂಡಿ ಬಂದಿರುವ ಇಕ್ಕಟ್ ಚಿತ್ರದಲ್ಲಿ ನಾಗಭೂಷಣ್ ಮತ್ತು ಭೂಮಿಕಾ ಶೆಟ್ಟಿ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. ಚಿತ್ರದಲ್ಲಿ ಸುಂದರ್ ,ಆನಂದ್ ನೀನಾಸಂ, ಆರ್.ಜೆ.ವಿಕ್ಕಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ, ಚಿತ್ರಕ್ಕೆ ಡಾಸ್ಮೊಡ್ ಸಂಗೀತ ನೀಡಿದ್ದಾರೆ.
ಡೈವೋರ್ಸ್ ತೆಗೆದುಕೊಳ್ಳುವ ಹಂತದಲ್ಲಿದ್ದ ದಂಪತಿಗಳಿಬ್ಬರು ಲಾಕ್ ಡೌನ್ ಕಾರಣ ಮನೆಯಲ್ಲಿಯೇ ಇರಬೇಕಾದ ಸ್ಥಿತಿ ಬರುತ್ತದೆ. ಮೊದಲ ಹಂತದ ಇಪ್ಪತ್ತೊಂದು ದಿನಗಳ ಲಾಕ್ ಡೌನ್ ನಲ್ಲಿ ಇರ್ವರು ಹೇಗೆ ಬದುಕುತ್ತಾರೆ ಮತ್ತು ಅತಿಥಿಯೊಬ್ಬನ ಆಗಮನ ಇವರ ಬದುಕನ್ನು ಹೇಗೆ ಬದಲಾಯಿಸುತ್ತದೆ ಎಂಬುದನ್ನು ಹಾಸ್ಯ ಮಿಶ್ರಿತ ಹಾರರ್ ಜಾನರ್ ನಲ್ಲಿ ಚಿತ್ರ ತೋರಿಸುತ್ತದೆ.
ಕಥೆ: (ವಾಸು) ನಾಗಭೂಷಣ್ ಹಾಗೂ ಆತನ ಪತ್ನಿ (ಭೂಮಿ ಶೆಟ್ಟಿ) ಬೆಂಗಳೂರಿನಲ್ಲಿ ವಾಸಿಸುವ ಮಧ್ಯಮ ವರ್ಗದ ಯುವ ದಂಪತಿ. ಮದುವೆಯ ನಂತರದ ಸಿಹಿ ಸಮಯ ಕಳೆದು ಪರಸ್ಪರ ಜಗಳ, ಕಾಲೆಳೆತಕ್ಕೆ ಅವರ ದಾಂಪತ್ಯ ಕಾಲಿಟ್ಟಿದೆ. ಇಬ್ಬರಿಗೂ ಪರಸ್ಪರರ ಸಾಂಗತ್ಯ ಕಿರಿ-ಕಿರಿ ತರುತ್ತಿರುವ ಸಮಯದಲ್ಲಿಯೇ ಮೋದಿ ಲಾಕ್‌ಡೌನ್ ಘೋಷಿಸುತ್ತಾರೆ. ಇಬ್ಬರೂ ಕೊರೊನಾಕ್ಕೆ ಹೆದರಿ ದಿನ ಕಳೆಯಬೇಕಾದರೆ ಅವರ ಮನೆಗೆ ಒಬ್ಬ ಅಗಂತುಕ ಹಾಗೂ ಒಬ್ಬ ಅತಿಥಿಯ ಆಗಮನವಾಗುತ್ತದೆ. ಇಲ್ಲಿಂದ ಇವರ ಮಧ್ಯೆ ನಡೆಯುವ ಸಂದರ್ಭಗಳು ಚಿತ್ರದ ಹಾಸ್ಯದ ಡೋಸ್ ನ್ನು ಹೆಚ್ಚಿಸುತ್ತವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+