ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದಲ್ಲಿ ಮೂಡಿ ಬಂದಿರುವ ಇಂಡಿಯಾ vs ಇಂಗ್ಲೆಂಡ್ ಚಿತ್ರದಲ್ಲಿ ವಶಿಷ್ಟಸಿಂಹ ಮತ್ತು ಮಾನ್ವಿತಾ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಅನಂತನಾಗ್, ಸುಮಲತಾ, ಪ್ರಕಾಶ್ ಬೆಳವಾಡಿ, ಸಾಧು ಕೋಕಿಲಾ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ನೀಡಿದ್ದಾರೆ.
ಕಥೆ: ವಿದೇಶದಿಂದ ಭಾರತ ನೋಡಲು ಬರುವ ನಾಯಕ ಕಾನಿಷ್ (ವಸಿಷ್ಟ ಸಿಂಹ). ಆತನಿಗೆ ಭಾರತ ತೋರಿಸುವ ಹುಡುಗಿ ಮೈದಿನಿ (ಮಾನ್ವಿತಾ). ನಾಯಕಿ ಇಂಡಿಯಾ ಗ್ರೇಟ್ ಅಂದ್ರೆ.. ನಾಯಕ ಇಂಗ್ಲೆಂಡ್ ಗ್ರೇಟ್ ಎನ್ನುತ್ತಾನೆ. ಇಬ್ಬರ ವಾದ.. ವಿವಾದ.. ಚರ್ಚೆ, ಜಗಳ ಇಡೀ ಸಿನಿಮಾದಲ್ಲಿ ತುಂಬಿಕೊಂಡಿದೆ. ಈ ಎರಡು ಪಾತ್ರಗಳು ಎರಡು ದೇಶಗಳನ್ನು ಪ್ರತಿನಿಧಿಸುತ್ತಾರೆ.