ದಿನೇಶ್ ಬಾಬು ನಿರ್ದೇಶನದಲ್ಲಿ ಮೂಡಿಬಂದ ಇನ್ಸ್‌ಪೆಕ್ಟರ್ ವಿಕ್ರಮ್ ಚಿತ್ರದಲ್ಲಿ ಶಿವರಾಜ ಕುಮಾರ್ ಮತ್ತು ಕಾವ್ಯ ಮುಖ್ಯಪಾತ್ರದಲ್ಲಿ ನಟಿಸಿದರು. ರಾಘವೇಂದ್ರ ರಾಜಕುಮಾರ್ ನಿರ್ಮಾಣದಲ್ಲಿ ಮೂಡಿಬಂದ ಈ ಚಿತ್ರಕ್ಕೆ ವಿಜಯಾನಂದ ಸಂಗೀತ ನೀಡಿದರು.
ಪೋಲಿಸ್ ಅಧಿಕಾರಿ ಎಂದರೆ ಕೇವಲ ಸೀರಿಯಸ್ ಇರಬೇಕು ಎನ್ನುವ ಸಿದ್ಧ ಸೂತ್ರವನ್ನು ಮುರಿದು ಒಬ್ಬ ಪೋಲಿಸ್ ಅಧಿಕಾರಿ ಅಜಾಗರೂಕನಾಗಿ ಹಾಸ್ಯ ಮಾಡುತ್ತ ಮತ್ತು ರೋಮಿಯೋ ಕೂಡ ಆಗಿ ತನ್ನ ಕರ್ತವ್ಯ ನಿರ್ವಹಿಸಬಲ್ಲ ಎಂಬುದನ್ನು ಚಿತ್ರ ತೋರಿಸಿತು.