ನಿರ್ದೇಶಕರಾಗಿ ಯಶಸ್ಸು ಪಡೆದ ಕನ್ನಡದ ಪ್ರಮುಖ ನಟರು

  ನಿರ್ದೇಶಕರು ನಟರಾಗುವುದು ಚಿತ್ರರಂಗದಲ್ಲಿ ಸಾಮಾನ್ಯ. ಹಾಗೇ ಕೆಲ ನಟರು ನಿರ್ದೇಶನ ಮತ್ತು ನಿರ್ಮಾಣಕ್ಕಿಳಿದು ಯಶಸ್ಸು ಕಂಡಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ರವಿಚಂದ್ರನ್, ಕಿಚ್ಚ ಸುದೀಪ್, ರಕ್ಷಿತ್ ಶೆಟ್ಟಿ ಮುಂತಾದವರು ನಿರ್ದೇಶನದಲ್ಲಿ ಒಳ್ಳೆಯ ಪ್ರಯೋಗ ಮಾಡಿ ಗೆದ್ದಿದ್ದಾರೆ. ನಟನಾಗಿ ಸಿನಿ ಜರ್ನಿ ಅರಂಭಿಸಿ ನಿರ್ದೇಶನಕ್ಕಿಳಿದ ಕನ್ನಡದ ಸಿನಿತಾರೆಯರು ಇಲ್ಲಿದ್ದಾರೆ ನೋಡಿ..

  1. ದ್ವಾರಕೀಶ್

  ಸುಪರಿಚಿತರು

  Actor/Producer/Director

  ಜನಪ್ರಿಯ ಚಲನಚಿತ್ರಗಳು

  ಚೌಕ, ಆಟಗಾರ, ಆಟಗಾರ

  ಕನ್ನಡದ ಪ್ರಚಂಡ ಕುಳ್ಳ ಮತ್ತು ಖ್ಯಾತ ನಿರ್ಮಾಪಕ ದ್ವಾರಕೀಶ್ ತಮ್ಮ ಚಿಕ್ಕಪ್ಪ ಹುಣಸೂರು ಕೃಷ್ಣಮೂರ್ತಿ ಮಾರ್ಗದರ್ಶನದಲ್ಲಿ ನಟನೆಗೆ ಇಳಿದ ದ್ವಾರಕೀಶ್ ವಿಷ್ಣುವರ್ಧನ್ ರ ನೀ ಬರೆದ ಕಾದಂಬರಿ ಚಿತ್ರದ ಮೂಲಕ ನಿರ್ದೇಶನಕ್ಕಿಳಿದರು. ನಂತರ ಶೃತಿ, ರಾಯರು ಬಂದರು ಮಾವನ ಮನೆಗೆ ಮುಂತಾದ ಚಿತ್ರಗಳನ್ನು ನಿರ್ದೇಶಿಸಿದರು. 

  2. ಶಂಕರ್ ನಾಗ್

  ಸುಪರಿಚಿತರು

  Actor/Director/Screenplay/Producer/Singer/Story

  ಮರೆಯಲಾಗದ ಮಾಣಿಕ್ಯ ಶಂಕರನಾಗ್ ನಟನಾಗಿ ರಂಗಭೂಮಿ ಮತ್ತು ಚಿತ್ರರಂಗದಲ್ಲಿ ಪಯಣ ಆರಂಭಿಸಿದರೂ ನಂತರ ತಮ್ಮ ಸಹೋದರ ಅನಂತನಾಗ್ ಸಹಾಯದಿಂದ ನಿರ್ದೇಶನಕ್ಕಿಳಿದರು. ಒಂದು ಮುತ್ತಿನ ಕಥೆ, ಮಿಂಚಿನ ಓಟ, ಆ್ಯಕ್ಸಿಡೆಂಟ್ ಮುಂತಾದ ಒಂದಕ್ಕಿಂತ ಒಂದು ವಿಭಿನ್ನ ಚಿತ್ರಗಳನ್ನು ನಿರ್ದೇಶಿಸಿದರು.

  3. ರವಿಚಂದ್ರನ್

  ಸುಪರಿಚಿತರು

  Director/Producer/Music Director/Actor/Lyricst/Singer/Story/Screenplay

  ಜನಪ್ರಿಯ ಚಲನಚಿತ್ರಗಳು

  ದಶರಥ, ಆ ದೃಶ್ಯ, ಪಡ್ಡೆಹುಲಿ

  ಈಶ್ವರಿ ಪ್ರೊಡಕ್ಷನ್ಸ್ ಮೂಲಕ ಸಾಕಷ್ಟು ಸೂಪರ್ ಹಿಟ್ ಚಿತ್ರಗಳನ್ನು ನಿರ್ಮಿಸಿರುವ ಕ್ರೇಜಿಸ್ಟಾರ್ ರವಿಚಂದ್ರನ್ ಪ್ರೇಮಲೋಕ ಚಿತ್ರದಿಂದ ನಿರ್ದೇಶನಕ್ಕಿಳಿದರು. ನಂತರ ರಣಧೀರ, ಪುಟ್ನಂಜ, ಸಿಪಾಯಿ, ಓ ನನ್ನ ನಲ್ಲೆ, ಮಲ್ಲ ,ಕಲಾವಿದ ಸೇರಿದಂತೆ ಸುಮಾರು 25 ಚಿತ್ರಗಳನ್ನು ನಿರ್ದೇಶಿಸಿದ್ದಾರೆ.

   
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X