ರಾಜಾ ರವಿವರ್ಮಾ ನಿರ್ದೇಶನದ `ಜಕಣಾಚಾರಿ ಅವನ ತಮ್ಮ ಶುಕ್ಲಾಚಾರಿ' ಚಿತ್ರದಲ್ಲಿ ಗಿರೀಶ್ ಜತ್ತಿ ,ಮುನಿ, ನೀನಾಸಂ ಅಶ್ವಥ್, ಮನದೀಪ್ ರೈ, ಮೂಗು ಸುರೇಶ್ ಮುಂತಾದ ಕಲಾವಿದರು ನಟಿಸಿದ್ದಾರೆ.ಹೆಚ್ ಸೋಮಶೇಖರ್ ಚಿತ್ರಕ್ಕೆ ಬಂಡವಾಳ ಹೂಡಿದ್ದರೆ, ಅನಿಲ್ ಸಿ.ಜೆ ಚಿತ್ರಕ್ಕೆ ಸಂಗೀತ ನೀಡಿದ್ದಾರೆ.
ಚಿತ್ರದಲ್ಲಿ ಬಡತನದಲ್ಲಿ ಬೆಂದ ಇಬ್ಬರು ಸಹೋದರರ ಗಾಥೆಯನ್ನು ತೋರಿಸಲಾಗಿದೆ. ಹಲವು ಮಾಧ್ಯಮಗಳಲ್ಲಿ ಸುದ್ಧಿ ಮಾಡಿದ್ದ ಎಂಡೋಸಲ್ಫಾನ್ ಕಾಯಿಲೆಯ ಒಂದು ಮುಖ ಚಿತ್ರದಲ್ಲಿ ಕಾಣುತ್ತದೆ. ಪಾರ್ಶ್ವವಾಯುವಿನಿಂದ ಹಾಸಿಗೆ ಹಿಡಿದ ತಂದೆ ಮತ್ತು ದಿನಗೂಲಿ ಕೆಲಸ ಮಾಡುವ ತಾಯಿ ಮತ್ತು ಅಂಗವಿಕಲ ಮಕ್ಕಳು. ಅಂಗವಿಕಲರಾದರು ಮನೆಯ ಕಷ್ಟಕ್ಕೆ ನೆರವಾಗಲು ಇಬ್ಬರು ಬಾಲಕರು ಹಲವು ರೀತಿ ದುಡಿಮೆ ಮಾಡುತ್ತಾರೆ.
ವಂಶಪಾರಂಪರೆಯಿಂದ ಬರುವ ಹಣದ ಮದದಿಂದ ಎಷ್ಟೋ ಯುವಕರು ದುಡಿದು ತಿನ್ನದೇ ಹಾದಿ ಬಿಟ್ಟು ನೆಡೆಯುವಾಗ ಈ ಚಿತ್ರದಲ್ಲಿನ ಅಂಗವಿಕಲ ಸಹೋದರರು ನಿಯತ್ತಾಗಿ ದುಡಿದು ತಿನ್ನುವ ಪಾಠ ಹೇಳುವುದು ಪ್ರಶಂಸನೀಯ.