ಜಿಗರ್ ಸಿನಿಮಾವನ್ನು ಸೂರಿ ಕುಂದರ್ ನಿರ್ದೇಶನ ಮಾಡಿದ್ದಾರೆ. ಚಿತ್ರದಲ್ಲಿ ಪ್ರವೀಣ್ ತೇಜ್ ನಾಯಕನಾಗಿ ಹಾಗೂ ವಿಜಯಶ್ರೀ ಕಲಬುರಗಿ ನಾಯಕಿಯಾಗಿ ಅಭಿನಯಿಸಿದ್ದಾರೆ. ಉಳಿದಂತೆ ವಿನಯ ಪ್ರಸಾದ್, ಯಶ್ ಶೆಟ್ಟಿ, ಬಾಲ ರಾಜ್ವಾಡಿ ಸೇರಿದಂತೆ ಹಲವರು ತಾರಾಗಣದಲ್ಲಿದ್ದಾರೆ. ರುತ್ವಿಕ್ ಮುರಳೀಧರ್ ಸಂಗೀತ, ಶಿವಸೇನಾ ಛಾಯಾಗ್ರಹಣ ಚಿತ್ರಕ್ಕಿದೆ. ಜಿಗರ್ ಸಿನಿಮಾವನ್ನು ಪೂಜಾ ವಸಂತ್ ಕುಮಾರ್ ಯುಕೆ ಪ್ರೊಡಕ್ಷನ್ ಬ್ಯಾನರ್ ಅಡಿ ನಿರ್ಮಿಸಿದ್ದಾರೆ.