twitter
    Kannada»Movies»Jogi»Story

    ಜೋಗಿ ಕಥೆ

    ಪ್ರೇಮ್ ನಿರ್ದೇಶನದಲ್ಲಿ ಮೂಡಿಬಂದ `ಜೋಗಿ' ಚಿತ್ರದಲ್ಲಿ ಶಿವರಾಜಕುಮಾರ್ ಜೊತೆ ಜೆನ್ನಿಫರ್ ಕೊತ್ವಾಲ್ ನಾಯಕಿಯಾಗಿ ನಟಿಸಿದ್ದಾರೆ.ಈ ಚಿತ್ರದ ನಟನಗೆ ಶಿವಣ್ಣ ರಾಜ್ಯ ಪ್ರಶಸ್ತಿ ಪಡೆದಿದ್ದಾರೆ. ಚಿತ್ರ ಅತಿದೊಡ್ಡ ಮಟ್ಟದ ಯಶಸ್ಸು ಕಂಡು 2005 ರಲ್ಲಿ ಅತ್ಯಧಿಕ ಗಳಿಕೆ ಕಂಡ ಚಿತ್ರವಾಯಿತು. ಭೂಗತ ಲೋಕದ ಛಾಯೆಯೊಂದಿಗೆ ಮಾತೃವಾತ್ಸಲ್ಯವನ್ನು ಚಿತ್ರಿಸಿತು.ಈ ಚಿತ್ರ ಸುಮಾರು 63 ಕೇಂದ್ರಗಳಲ್ಲಿ 50 ದಿನ ಪೂರೈಸಿ , 45 ಚಿತ್ರಮಂದಿರಗಳಲ್ಲಿ ಶತದಿನೋತ್ಸವ ಪೂರೈಸಿತು.

    ಪುಟ್ಟ ಹಳ್ಳಿಯಿಂದ ಪಟ್ಟಣಕ್ಕೆ ಬರುವ ಮುಗ್ಧ ಯುವಕನೊಬ್ಬ ಗೊತ್ತಿಲ್ಲದೇ ಭೂಗತ ಲೋಕಕ್ಕೆ ಎಂಟ್ರಿ ಕೊಡುತ್ತಾನೆ. ನಂತರ ಆ ಲೋಕದ ಅತಿ ದೊಡ್ಡ ರೌಡಿಯಾಗುತ್ತಾನೆ. ನಂತರ ಇವನ ತಾಯಿ ಇವನನ್ನು ಹುಡುಕಿಕೊಂಡು ಇವನ ತಾಯಿ ಬೆಂಗಳೂರಿಗೆ ಬರುತ್ತಾಳೆ. ತನ್ನ ಮಗನನ್ನು ನೋಡುವ ಹಂಬಲದಿಂದ ಮಡಿಯುವ ತಾಯಿ ಮತ್ತು ತನ್ನ ತಾಯಿಯನ್ನು ಕೊನೆಯ ಬಾರಿ ಕೂಡ ನೋಡಲಾಗದ ಮಗ ಹೀಗೆ ಚಿತ್ರ ಭೂಗತ ಲೋಕದ ಹಿನ್ನಲೆಯಲ್ಲಿ ತಾಯಿ ಮಗನ ಸಂಬಂಧವನ್ನು ತೆರೆದಿಡುತ್ತದೆ.

    **Note:Hey! Would you like to share the story of the movie ಜೋಗಿ with us? Please send it to us ([email protected]).
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X