ಜುಗಲ್‌ಬಂದಿ ಸಿನಿಮಾವನ್ನು ದಿವಾಕರ್ ಡಿಂಡಿಮ ನಿರ್ದೇಶನ ಮಾಡಿದ್ದಾರೆ. ಸಿನಿಮಾ ಕಥೆ, ಚಿತ್ರಕಥೆ, ಸಾಹಿತ್ಯ, ನಿರ್ದೇಶನದ ಜೊತೆಗೆ ತಮ್ಮ ಮೊದಲ ಸಿನಿಮಾದ ನಿರ್ಮಾಣವನ್ನು ಇವೇ ಮಾಡಿದ್ದಾರೆ. ಸಸ್ಪೆನ್ಸ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ಈ ಚಿತ್ರದಲ್ಲಿ ಕಾಂತಾರ ಖ್ಯಾತಿಯ ಮಾನಸಿ ಸುಧೀರ್, ಅರ್ಚನಾ ಕೊಟ್ಟಿಗೆ, ಅಶ್ವಿನ್ ರಾವ್, ಸಂತೋಷ್ ಆಶ್ರಯ್, ಯಶ್ ಶೆಟ್ಟಿ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಉಳಿದಂತೆ ಪ್ರಕಾಶ್ ಬೆಳಗಲ್, ಚಂದ್ರಪ್ರಭಾ ಜಿ ಯುವಕ, ರಂಜನ್, ಯುಕ್ತ ಅಲ್ಲು ಸುಶ್ ಒಳಗೊಂಡಂತೆ ಹಲವರ ತಾರಾಬಳಗವಿದೆ.
ಪ್ರದ್ಯೋತ್ತನ್ ಸಂಗೀತ ನಿರ್ದೇಶನ, ಪ್ರಸಾದ್ ಹೆಚ್.ಎಂ ಸಂಕಲನ ಚಿತ್ರಕ್ಕಿದೆ. ಜುಗಲ್‌ಬಂದಿ ಸಿನಿಮಾದಲ್ಲಿ ಮೂರು ಹಾಡುಗಳಿದ್ದು, ಮೂರೂ ಹಾಡುಗಳಿಗೆ ನಿರ್ದೇಶಕ ದಿವಾಕರ್ ಸಾಹಿತ್ಯ ಬರೆದಿದ್ದಾರೆ.
ಬಿಡುಗಡೆ: ಜುಗಲ್‌ಬಂದಿ ಸಿನಿಮಾ 2024ರ ಮರ್ಚ್ 1ರಂದು ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಯಿತು.