ಕಡಲ್ ಸಿನಿಮಾವನ್ನು ಚಂದನವನದ ಖ್ಯಾತ ಸಂಗೀತ ನಿರ್ದೇಶಕ ರವಿ ಬಸ್ರೂರು ನಿರ್ದೇಶನ ಮಾಡಿದ್ದಾರೆ. ಸಿನಿಮಾದ ನಾಯಕರಾಗಿ ಸೌರಭ್ ಭಂಡಾರಿ, ಸೂಚನ್ ಶೆಟ್ಟಿ ಹಾಗೂ ನಾಯಕಿಯಾಗಿ ಚಿರಶ್ರೀ ಅಂಚನ್ ಕಾಣಿಸಿಕೊಂಡಿದ್ದಾರೆ. ಉಳಿದಂತೆ ಭಾಸ್ಕರ್ ಬಸ್ರೂರು, ನಾಗೇಂದ್ರ ಕೋಟೆ, ಸುಜಾತ ಅಂದ್ರದೆ, ವಿಜಯ್ ಬಸ್ರೂರು ಸೇರಿದಂತೆ ಹಲವರು ತಾರಾಗಣದಲ್ಲಿದ್ದಾರೆ.
ಈ ಚಿತ್ರವನ್ನು ಓಂಕಾರ್ ಮೂವೀಸ್ ಬ್ಯಾನರ್ ಅಡಿ ಎನ್.ಎಸ್ ರಾಜ್‌ಕುಮಾರ್ ನಿರ್ಮಾಣ ಮಾಡಿದ್ದಾರೆ. ಸಚಿನ್ ಬಸ್ರೂರು ಛಾಯಾಗ್ರಹಣ ಮಾಡಿದ್ದು, ನಿರ್ದೇಶನ, ಸಂಗೀತ ಹಾಗೂ ಸಂಕಲನದ ಜವಾಬ್ದಾರಿಯನ್ನು ರವಿ ಬಸ್ರೂರು ಅವರೇ ಹೊತ್ತಿದ್ದಾರೆ.
ಕಥೆ: ಕರಾವಳಿ ಮೀನುಗಾರರ ಬದುಕಿನ ಕಥೆಯನ್ನು ಆಧರಿಸಿ ಈ ಸಿನಿಮಾ ನಿರ್ದೇಶಿಸಿದ್ದು, ಮೀನುಗಾರರ ಜೊತೆ ಪ್ರೀತಿ-ಪ್ರೇಮ, ದ್ವೇಷದ ಕಹಾನಿಯೂ ಈ ಸಿನಿಮಾ ಒಳಗೊಂಡಿದೆ.