ಕಡಲ ತೀರದ ಭಾರ್ಗವ ಸಿನಿಮಾವನ್ನು ನವ ನಿರ್ದೇಶಕ ಪನ್ನಗ ಸೋಮಶೇಖರ್ ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾದಲ್ಲಿ ಬಿಗ್ ಬಾಸ್ ಖ್ಯಾತಿಯ ಶ್ರುತಿ ಪ್ರಕಾಶ್ ನಾಯಕಿಯಾಗಿ ನಟಿಸಿದ್ದು, ಭರತ್ ಗೌಡ ಹಾಗೂ ಪಟೇಲ್ ವರುಣ್ ರಾಜು ನಾಯಕರಾಗಿಬೆಳ್ಳಿತೆರೆಗೆ ಕಾಲಿಟ್ಟಿದ್ದಾರೆ. ಈ ಇಬ್ಬರು ನಾಯಕರೇ ಸಿನಿಮಾಗೆ ಬಂಡವಾಳ ಹಾಕಿದ್ದಾರೆ. ಇಬ್ಬರು ಸ್ನೇಹಿತರು ಹಾಗೂ ನಾಯಕಿಯ ಸುತ್ತ ನಡೆಯುವ ಸಸ್ಪೆನ್ಸ್, ಥ್ರಿಲ್ಲರ್ ಸಿನಿಮಾ ಕಡಲ ತೀರದ ಭಾರ್ಗವ.
ಇವಕಲ ಸ್ಟುಡಿಯೋ ಬ್ಯಾನರ್ ಅಡಿ ಈ ಸಿನಿಮಾ ನಿರ್ಮಾಣವಾಗಿದ್ದು, ಚಿತ್ರದಲ್ಲಿ ಶ್ರೀಧರ್, ರಾಘವ್ ನಾಗ್, ಅಶ್ವಿನ್ ಹಾಸನ್ ಹಲವು ಕಲಾವಿದರಿದ್ದಾರೆ. ಬೆಂಗಳೂರು, ಕೊಡಗು, ಉಡುಪಿ, ಭಟ್ಕಳ, ಮುರುಡೇಶ್ವರ ಕಡಲ ತೀರದಲ್ಲಿ ಸಿನಿಮಾ ಚಿತ್ರೀಕರಿಸಲಾಗಿದೆ. ಚಿತ್ರಕ್ಕೆ ಅನಿಲ್ ಸಿ.ಜೆ ಸಂಗೀತ ಸಂಯೋಜನೆ, ಕೀರ್ತನ್ ಪೂಜಾರ್ ಛಾಯಾಗ್ರಹಣ, ಆಶಿಕ್ ಕೂಸುಗೊಳ್ಳಿ ಹಾಗೂ ಉಮೇಶ್ ಬೋಸಗಿ ಸಂಕಲನ ಚಿತ್ರಕ್ಕಿದೆ.
ಬಿಡುಗಡೆ: ಕಡಲ ತೀರದ ಭಾರ್ಗವ ಸಿನಿಮಾ 2023ರ ಮಾರ್ಚ್ 3ರಂದು ಬಿಡುಗಡೆಯಾಯಿತು.