'ಕದ್ದ ಚಿತ್ರ' ಸಿನಿಮಾವನ್ನು ಸುಹಾಸ್ ಕೃಷ್ಣ ನಿರ್ದೇಶನ ಮಾಡಿದ್ದಾರೆ. ಇದು ಅವರ ಎರಡನೇ ಸಿನಿಮಾ. ಚಿತ್ರದಲ್ಲಿ ವಿಜಯ್ ರಾಘವೇಂದ್ರ ನಾಯಕನಾಗಿ ಹಾಗೂ ನಾಯಕಿಯಾಗಿ ನಮ್ರತಾ ಸುರೇಂದ್ರನಾಥ್ ಅಭಿನಯಿಸಿದ್ದಾರೆ. ಮಗಳ ಪಾತ್ರದಲ್ಲಿ ಬಾಲನಟಿ ಆರಾಧ್ಯ ನಟಿಸಿದ್ದಾಳೆ. ಉಳಿದಂತೆ ಕಿರುತೆರೆ ನಟ ತ್ರಿವಿಕ್ರಮ್, ರಾಘು ಶಿವಮೊಗ್ಗ ಬಾಲಾಜಿ ಮನೋಹರ್ ಅಭಿನಯಿಸಿದ್ದಾರೆ. ನೆಗೆಟಿವ್ ಪಾತ್ರದಲ್ಲಿ ಸುಜಿತ್ ಸುಪ್ರಭ, ಸ್ಟಿಫನ್, ವಿನಯ್ ಕಾಣಿಸಿಕೊಂಡಿದ್ದಾರೆ. ಬೆಂಗಳೂರು ಮತ್ತು ಕೇರಳದಲ್ಲಿ ಸಿನಿಮಾ ಚಿತ್ರೀಕರಿಸಲಾಗಿದೆ.
ಬಿಡುಗಡೆ: ಕದ್ದ ಚಿತ್ರ ಸಿನಿಮಾ 2023ರ ಸೆಪ್ಟಂಬರ್ 8ರಂದು ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಯಿತು.