ಕಾಂಚನ 3 (2019)(U/A)
ಕಾಂಚನ 3 ಕಥೆ
ಭೂತ- ಪ್ರೇತಗಳೆಂದರೆ ಹೆದರಿ ನಡುಗುವ ರಾಘವ ಮೇಲೆ ಭೂತ ಬಂದಾಗ ಏನಾಗುತ್ತದೆ ಎಂಬುದು ಕಾಂಚನ ಚಿತ್ರಸರಣಿಗಳ ಮುಖ್ಯ ಕಥಾವಸ್ತು,ರಾಘವ ಲಾರೆನ್ಸ್ ನಿರ್ದೇಶಿಸಿ ನಿರ್ಮಿಸಿರುವ ಹಾರರ್ ಕಾಮಿಡಿ ಕಾಂಚನ 3 ಚಿತ್ರ ಮೂಲತಃ ತಮಿಳುನಲ್ಲಿ ನಿರ್ಮಾಣಗೊಂಡಿದ್ದು ಕನ್ನಡದಲ್ಲಿ ಮೂಲ ಹೆಸರಿನಲ್ಲಿ ಡಬ್ ಆಗಿ ಬಿಡುಗಡೆಗೊಂಡಿದೆ. ಎಸ್ ಥಮನ್ ಚಿತ್ರಕ್ಕೆ ಸಂಗೀತ ನೀಡಿದ್ದಾರೆ.ನಾಯಕಿಯರಾಗಿ ವೇದಿಕಾ ,ಒವಿಯಾ ನಟಿಸಿದ್ದರೆ, ಕೋವೈ ಸರಳಾ, ಕಬೀರ್ ದುಹಾನ್ ಸಿಂಗ್ ಮುಂತಾದವರು ಪೋಷಕ ಪಾತ್ರಗಳಲ್ಲಿ ನಟಿಸಿದ್ದಾರೆ.
ರಾಘವ ತನ್ನ ತಾಯಿ ಮತ್ತು ಕುಟುಂಬದೊಂದಿಗೆ ಚೆನ್ನೈನ್ಲಲ್ಲಿ ನೆಲೆಸಿರುತ್ತಾನೆ. ಕೊಯಿಮುತ್ತೂರಿನಲ್ಲಿ ನೆಲೆಸಿರುವ ತನ್ನ ತಾತ-ಅಜ್ಜಿಯ ಷಷ್ಠಿ ಪೂರ್ತಿ ಸಂಭ್ರಮಕ್ಕೆ ಕುಟುಂಬದೊವರೊಂದಿಗೆ ಕಾರಿನಲ್ಲಿ ಕೊಯಿಮುತ್ತೂರಿನ ಕಡೆಗೆ ಪ್ರಯಾಣ ಬೆಳೆಸುತ್ತಾನೆ. ನಡುವೆ ದಾರಿಯಲ್ಲಿ ಊಟಕ್ಕೆಂದು ಒಂದು ಹೊಟೇಲ್ ಹತ್ತಿರ ನಿಲ್ಲಿಸಿದಾಗ ರಾಘವ ಹತ್ತಿರದ ಒಂದು ಮರಕ್ಕೆ ಸಾಕಷ್ಟು ಮೊಳೆಗಳನ್ನು ಹೊಡೆದಿರುವುದನ್ನು ನೋಡುತ್ತಾನೆ. ಹಾಗೇ ಸುಮ್ಮನೇ ಮರದ ಕೆಲವು ಮೊಳೆಗಳನ್ನು ತೆಗೆಯುತ್ತಾನೆ. ನಂತರ ಕೊಯಿಮುತ್ತೂರಿಗೆ ಹಿಂದಿರುಗುವ ರಾಘವ ಅಲ್ಲಿ ತನ್ನ ತಾತನ ಮನೆಯಲ್ಲಿ ವಿಚಿತ್ರ ವಿಚಿತ್ರವಾಗಿ ವರ್ತಿಸಲು ಪ್ರಾರಂಭಿಸುತ್ತಾನೆ.
ತದನಂತರ ಒಬ್ಬ ಸ್ವಾಮೀಜಿಯಿಂದ ರಾಘವನ ಮೈಮೇಲೆ 7 ಭೂತಗಳು ಪ್ರವೇಶವಾಗಿರುದು ತಿಳಿಯುತ್ತದೆ. ಅವು ಯಾರ ಪ್ರೇತಗಳು ಮತ್ತು ಅವು ಯಾರ ಮೇಲೆ ಸೇಡು ತಿರಿಸಿಕೊಳ್ಳಲು ಬಂದಿವೆ ಎಂಬುದು ಚಿತ್ರದ ಕಥಾವಸ್ತು.