ಕಥಾ ಸಂಗಮ ಕಥೆ

  ಈ ಚಿತ್ರವೂ 7 ಭಿನ್ನ ಭಿನ್ನ ಕಥೆಗಳ ಕಥಾಸರಣಿಯಾಗಿದ್ದು ಒದೊಂದು ಕಥೆಯಲ್ಲಿ ಬೇರೆ ಬೇರೆ ಪಾತ್ರವರ್ಗವಿದೆ. 1976 ರಲ್ಲಿ ಪುಟ್ಟಣ್ಣ ಕಣಗಾಲ್‌ರವರು ಇದೇ ಹೆಸರಿನಲ್ಲಿ ಪಂಚ ಭಿನ್ನ ಕಥಾ ಗುಚ್ಚಗಳ ಚಿತ್ರವನ್ನು ನಿರ್ದೇಶಿಸಿದ್ದರು.

  ಪ್ರಸ್ತುತ ಈ ಚಿತ್ರದಲ್ಲಿ ರಿಷಭ್ ಶೆಟ್ಟಿ,ಹರಿಪ್ರಿಯಾ,ರಾಜ ಬಿ ಶೆಟ್ಟಿ,ಕಿಶೋರ್, ಯಜ್ಞಾ ಶೆಟ್ಟಿ ಮುಂತಾದವರು ನಟಿಸುತ್ತಿದ್ದಾರೆ. ಚಿತ್ರದ 7 ಕಥೆಗಳನ್ನು 7 ಬೇರೆ ಬೇರೆ ನಿರ್ದೇಶಕರು ನಿರ್ದೇಶಿಸಿದ್ದಾರೆ.ಚಿತ್ರದ ಟ್ರೇಲರ್ ದಿವಂಗತ ಪುಟ್ಟಣ್ಣ ಕಣಗಾಲ್ ರವರ ಪತ್ನಿ ನಾಗಲಕ್ಷ್ಮಿಯವರು 2019 ನವೆಂಬರ್ 4 ರಂದು ಬಿಡುಗಡೆ ಮಾಡಿದ್ದಾರೆ.ಚಿತ್ರದ ನಿರ್ದೇಶಕರು ಮಾತ್ರವಲ್ಲ ಏಳು ಜನ ಸಂಗೀತ ನಿರ್ದೇಶಕರು ,ಏಳು ಜನ ಛಾಯಾಗ್ರಾಹಕರನ್ನು ಹೊಂದಿರುವ ಈ ತಂಡ ಕರ್ನಾಟಕ ವಿವಿಧ ಪ್ರದೇಶಗಳ ಕಥೆಗಳನ್ನು ಹೊಂದಿದೆ. ಕನ್ನಡದ ಭಾಷಾ ವೈವಿಧ್ಯತೆಯನ್ನು ಇದರಲ್ಲಿ ಕಾಣಬಹುದು.

  ಅಪ್ಪ, ಅಮ್ಮ, ಮಗಳು.. ಮಗಳಿಗಾಗಿ ಏನನ್ನು ಬೇಕಾದರೂ ಮಾಡುವ ಅಪ್ಪ. ಈ ಚಿಕ್ಕ ಕುಟುಂಬದ ಪ್ರೀತಿ ತುಂಬಿದ ಕಥೆಯೇ 'ರೈನ್ ಬೋ ಲ್ಯಾಂಡ್'. ಸತ್ಯ ಎನ್ನುವ ನಿವೃತ್ತಿಯ ಅಂಚಿನಲ್ಲಿ ಇರುವ ಉದ್ಯೋಗಿಯ ಮನಸಿನ ಕಥೆ 'ಸತ್ಯಕಥಾ ಪ್ರಸಂಗ'. ಜೋಡಿ ಹಕ್ಕಿಗಳ ಸರಸ ವಿರಸದ ಕಥೆ 'ಗಿರ್ ಗಿಟ್ಲೆ'. ಮಾಧ್ಯಮ, ಸೋಷಿಯಲ್ ಮೀಡಿಯಾದ ಸುತ್ತ ಸಾಗುವ ಕಥೆ 'ಉತ್ತರ'. ಕ್ರೌರ್ಯದ ಕಥೆ 'ಪಡುವಾರಹಳ್ಳಿ'. ಭಯ ತುಂಬಿದ ಕಥೆ 'ಸಾಗರ ಸಂಗಮ', ಹಳ್ಳಿಯಿಂದ ಬೆಂಗಳೂರಿಗೆ ಬರುವ ಮುಗ್ಧ ಹೆಂಗಸಿನ ಕಥೆ 'ಲಚ್ಚವ್ವ'. ಈ ರೀತಿಯ ಏಳು ಬೇರೆ ಬೇರೆ ಕಥೆಗಳು ಸಿನಿಮಾದಲ್ಲಿ ಇವೆ.

  **Note:Hey! Would you like to share the story of the movie ಕಥಾ ಸಂಗಮ with us? Please send it to us (popcorn@oneindia.co.in).
   
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X