ಕೆ.ಎಸ್.ಆರ್.ದಾಸ್ ನಿರ್ದೇಶನದಲ್ಲಿ ಮೂಡಿಬಂದ ಈ ಚಿತ್ರದಲ್ಲಿ ವಿಷ್ಣುವರ್ಧನ್, ರಜನಿಕಾಂತ್, ಕವಿತಾ ಮುಖ್ಯ ಪಾತ್ರದಲ್ಲಿ ನಟಿಸಿದ್ದರು. ಈ ಚಿತ್ರಕ್ಕೆ ಚಿ, ಉದಯಶಂಕರ್ ಸಂಭಾಷಣೆ ಬರೆದಿದ್ದರು. ನಟಿ ಸುಧಾರಾಣಿ ಬೇಬಿ ಜಯಶ್ರೀ ಹೆಸರಿನಲ್ಲಿ ಬಾಲನಟಿಯಾಗಿ ನಟಿಸಿದ್ದರು.
ಈ ಚಿತ್ರದಲ್ಲಿ ರಾಬಿನ ಹುಡ್ ಮಾದರಿಯ ಕಳ್ಳನ ಪಾತ್ರದಲ್ಲಿ ವಿಷ್ಣುವರ್ಧನ್ ನಟಿಸಿದ್ದರೆ, ಕಳ್ಳನನ್ನು ಹಿಡಯುವ ಪಾತ್ರದಲ್ಲಿ ರಜನಿಕಾಂತ್ ಪೋಲಿಸ್ ಅವತಾರದಲ್ಲಿ ನಟಿಸಿದ್ದರು. ಈ ಚಿತ್ರದ ಮೂಲಕ ಮೂರನೇ ಬಾರಿಗೆ ವಿಷ್ಣು-ರಜನಿ ಜೊತೆಗೂಡಿದರು.