ಕಿರಿಕ್ et 11 ಸಿನಿಮಾವನ್ನು ಬಾಲಿವುಡ್ ನಿರ್ದೇಶಕ ಸುಮನ್ ಕುಮಾರ್ ನಿರ್ದೇಶನ ಮಾಡುತ್ತಿದ್ದಾರೆ. ಸುಮನ್ ಈ ಮೊದಲು ಫರ್ಜಿ, ಫ್ಯಾಮಿಲಿ ಮೆನ್ ಹಾಗೂ ಗೇಮ್ ಓವರ್ ರೀತಿಯ ವೆನ್ ಸಿರೀಸ್ ನಿರ್ದೇಶಿಸಿದ್ದಾರೆ. ಚಿತ್ರದಲ್ಲಿ ನವೀನ್ ಶಂಕರ್ ಹಾಗೂ ಡ್ಯಾನೀಶ್ ಸೇಠ್ ಮುಖ್ಯಪಾತ್ರದಲ್ಲಿ ನಟಿಸುತ್ತಿದ್ದಾರೆ. ಇದೊಂದು ಸಂಪೂರ್ಣ ಕ್ರಿಕೆಟ್ ಆಧಾರಿತ ಸಿನಿಮಾವಾಗಿದ್ದು, ಕೆಜಿಆರ್ ಸ್ಟುಡಿಯೋ ಬ್ಯಾನರ್ ಅಡಿಯಲ್ಲಿ ಕಾರ್ತಿಕ್, ವಿಜಯ್ ಸುಬ್ರಮಣ್ಯಂ, ಯೋಗಿ ಜಿ ರಾಜ್ ನಿರ್ಮಿಸುತ್ತಿದ್ದಾರೆ. ಚಿತ್ರಕ್ಕೆ ವಾಸುಕಿ ವೈಭವ್ ಸಂಗೀತ ನೀಡುತ್ತಿದ್ದಾರೆ.