ಕೆಕೆ ಸಿನಿಮಾವನ್ನು ಸುದೀರ್ಘ 9 ವರ್ಷಗಳ ಬಳಿಕ ಕಿಚ್ಚ ಸುದೀಪ್ ಅವರೇ ನಿರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರವನ್ನು ಕೆಆರ್‌ಜಿ ಸ್ಟುಡಿಯೋ ಸ್ಟುಡಿಯೋಸ್ ಬ್ಯಾನರ್‌ನಲ್ಲಿ ಕಾರ್ತಿಕ್ ಗೌಡ ಮತ್ತು ಯೋಗಿ ಜಿ ರಾಮ್ ನಿರ್ಮಾಣ ಮಾಡುತ್ತಿದ್ದಾರೆ. ಸಿನಿಮಾಗೆ ತಾತ್ಕಾಲಿಕವಾಗಿ ಕೆಕೆ ಎಂಬ ಶಿರ್ಷಿಕೆ ನೀಡಲಾಗಿದೆ. ಸದ್ಯ ಸುದೀಪ್ ಕೈಯಲ್ಲಿ ಕೆಲ ಸಿನಿಮಾಗಳಿದ್ದು, ಇದು 2024ರಲ್ಲಿ ಸೆಟ್ಟೇರಲಿದೆ.
ಲುಕ್: ಸುದೀಪ್ ಹುಟ್ಟುಹಬ್ಬದ ಪ್ರಯುಕ್ತ ಕೆಕೆ ಸಿನಿಮಾದ ಲುಕ್‌ವೊಂದನ್ನು ಬಿಡುಗಡೆ ಮಾಡಲಾಗಿದ್ದು, ಗಾಡ್ ಫಾರ್‌ಗಿವ್, ಐ ಡೋಂಟ್ ಎಂಬ ಅಡಿ ಬರಹವನ್ನು ನೀಡಲಾಗಿದೆ. 2014ರ ಮಾಣಿಕ್ಯ ಬಳಿಕ ಸುದೀಪ್ ಆಕ್ಷನ್ ಕಟ್ ಹೇಳುತ್ತಿರುವ ಈ ಸಿನಿಮಾ ಬಗ್ಗೆ ಸಾಕಷ್ಟು ಕುತೂಲಹಲ ಮೂಡಿದೆ.