ಕ್ಲಾಂತ ಸಿನಿಮಾವನ್ನು ವೈಭವ್ ಪ್ರಶಾಂತ್ ನಿರ್ದೇಶನ ಮಾಡಿದ್ದಾರೆ. ಚಿತ್ರದಲ್ಲಿ ಸಂಗೀತಾ ಭಟ್ ನಾಯಕಿಯಾಗಿ ಮತ್ತು ಎಂ ವಿಘ್ನೇಶ್ ನಾಯಕನಾಗಿ ಕಾಣಿಸಿಕೊಂಡಿದ್ದಾರೆ. ಉಳಿದಂತೆ ಶೋಭರಾಜ್, ವೀಣಾ ಸಂಗೀತ, ಕಾಮಿಡಿ ಕಿಲಾಡಿಗಳು ಖ್ಯಾತಿಯ ದೀಪಿಕಾ, ಪ್ರವೀಣ್ ಜೈನ್, ಯುವ, ತಿಮ್ಮಪ್ಪ ಕುಲಾಲ್, ಸ್ವಪ್ನ ಮುಂತಾದವರು ತಾರಾಗಣದಲ್ಲಿದ್ದಾರೆ. ಎಸ್.ಪಿ ಚಂದ್ರಕಾಂತ್ ಸಂಗೀತ, ಪಿ.ಆರ್ ಸೌಂದರ್ ರಾಜ್ ಸಂಕಲನ, ಮೋಹನ್ ಲೋಕನಾಥ್ ಛಾಯಾಗ್ರಹಣ ಚಿತ್ರಕ್ಕಿದೆ. ಅನುಗ್ರಹ ಪವರ್ ಮೀಡಿಯಾ ಬ್ಯಾನರ್ ಅಡಿ ಉದಯ್ ಅಮ್ಮಣ್ಣಾಯ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.
ಕಥೆ: ಇದೊಂದು ಸಸ್ಪೆನ್ಸ್ ಥ್ರಿಲ್ಲರ್ ಜಾನರ್ ಸಿನಿಮಾವಾಗಿದ್ದು, ಅಪ್ಪ-ಅಮ್ಮನಿಗೆ ಸುಳ್ಳು ಹೇಳಿ ತಪ್ಪು ದಾರಿ ಹಿಡಿಯಬೇಡಿ ಎಂಬ ಕಂಟೆಂಟ್ ಇಟ್ಟುಕೊಂಡು ಸಿನಿಮಾ ಮಾಡಲಾಗಿದೆ.
ಬಿಡುಗಡೆ: ಕ್ಲಾಂತ ಸಿನಿಮಾ ಜನವರಿ 19ರಂದು ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆ ಅಯಿತು.