2016 ರ ಸೂಪರ್ ಹಿಟ್ ಚಿತ್ರ `ಕೋಟಿಗೊಬ್ಬ 2' ನಂತರ ಕಿಚ್ಚ ಸುದೀಪ್ ಮತ್ತು ನಿರ್ಮಾಪಕ ಸೂರಪ್ಪ ಬಾಬು ಕಾಂಬಿನೇಷನ್ ನ ಈ ಚಿತ್ರವನ್ನು ಶಿವ ಕಾರ್ತಿಕ್ ನಿರ್ದೇಶನ ಮಾಡಿದ್ದಾರೆ.ಈ ಚಿತ್ರದ ಕಥೆಯನ್ನು ಸ್ವತಃ ಸುದೀಪ್ ಅವರೇ ಬರೆದಿದ್ದಾರೆ. ಜನೇವರಿ 20, 2020 ರಂದು ಚಿತ್ರದ ಶೂಟಿಂಗ್ ಮುಕ್ತಾಯವಾಯಿತು. ಆಶಿಕಾ ರಂಗನಾಥ್ ಚಿತ್ರದ ಒಂದು ಹಾಡಿಗೆ ಹೆಜ್ಜೆ ಹಾಕಿದ್ದಾರೆ.
ಕಥೆ: ತನ್ನ ಆಶ್ರಮದ ಹುಡುಗಿಗೆ ಅಪರೂಪದ ಕಾಯಿಲೆ ಎದುರಾದಾಗ, ಅದರ ಚಿಕಿತ್ಸೆಗಾಗಿ ಪೋಲೆಂಡಿಗೆ ಹೋಗುವ ನಾಯಕನಿಗೆ ನಾಯಕಿಯ ಪರಿಚಯವಾಗುತ್ತದೆ. ಎಲ್ಲಾ ಚಿತ್ರದಂತೆ, ಇಲ್ಲೂ ಪರಿಚಯ ಪ್ರೇಮಕ್ಕೆ ತಿರುಗುತ್ತದೆ.
ಪೋಲೆಂಡ್ ನಲ್ಲಿ ನಡೆಯುವ ಸಾಲುಸಾಲು ಬಾಂಬ್ ಬ್ಲ್ಯಾಸ್ಟ್, ಕೋಟ್ಯಾಂತರ ರೂಪಾಯಿ ಬೆಲೆಬಾಳುವ ಆಭರಣಗಳ ಕಳ್ಳತನದ ಹಿಂದೆ ಘೋಸ್ಟ್ ಪಾತ್ರವಿದೆ ಎಂದು ಇಂಟರ್ ಪೋಲ್ ಪೊಲೀಸರು ಮತ್ತು ವಿಲನ್, ಅವನನ್ನೇ ಹೋಲುವ ಸತ್ಯನ ಹಿಂದೆ ಬೀಳುತ್ತಾರೆ, ಸತ್ಯ ಜೈಲು ಪಾಲಾಗುತ್ತಾನೆ. ಅಲ್ಲಿ, ಎಸಿಪಿ ಕಿಶೋರ್ (ರವಿಶಂಕರ್) ಅವರ ಪರಿಚಯವಾಗುತ್ತದೆ. ಅಲ್ಲಿಂದ ಇಬ್ಬರೂ ಜೈಲಿನಿಂದ ತಪ್ಪಿಸಿಳ್ಳುತ್ತಾರೆ. ಸತ್ಯ-ಶಿವ-ಘೋಸ್ಟ್ ಪಾತ್ರಗಳು ಎಲ್ಲವೂ ಒಂದೇನಾ, ನಾಯಕ ಯಾವ ಕಾರಣಕ್ಕಾಗಿ ವಿಲನ್ ಮೇಲೆ ನಾಯಕ ಪ್ರತೀಕಾರ ತೆಗೆದುಕೊಳ್ಳುತ್ತಾನೆ ಎನ್ನುವುದು ಚಿತ್ರದ ಕಥೆ.
ಚಿತ್ರದಲ್ಲಿ ನಾಯಕಿಯಾಗಿ `ಪ್ರೇಮಂ' ಖ್ಯಾತಿ ಮಡೋನಾ ಸೆಬಾಸ್ಟಿಯನ್ ನಾಯಕಿಯಾಗಿ ನಟಿಸಿದರೆ. ಬಾಲಿವುಡ್ ನಟ ಅಪ್ತಭ್ ಶಿವದಾಸಾನಿ, ನವಾಜ ಶಾ, ಪಿ.ರವಿಶಂಕರ್ ಖಳನಾಯಕರಾಗಿ ಕಾಣಿಸಿಕೊಂಡಿದ್ದಾರೆ, ತೆಲಗು ನಟಿ ಶ್ರದ್ಧಾ ದಾಸ್ ಪೋಲಿಸ್ ಪಾತ್ರದಲ್ಲಿ ನಟಿಸಿದ್ದಾರೆ.
ಚಿತ್ರವಿಶೇಷತೆಗಳು
1.ಚಿತ್ರದ ಮೊದಲ ಟೀಸರ್‌ನ್ನು 2018,ಸೆಪ್ಟಂಬರ್ 2 ರಂದು ಸುದೀಪ್ ಜನ್ಮದಿನ ಪ್ರಯುಕ್ತ ಬಿಡುಗಡೆ ಮಾಡಲಾಯಿತು. ಟೀಸರ್ ಮೂರು ದಿನ ಟ್ರೆಂಡಿಂಗ್‌ನಲ್ಲಿತ್ತು.
2.ಚಿತ್ರದ ಕೆಲವು ಬಹುಮುಖ್ಯ ಭಾಗಗಳನ್ನು ಸರ್ಬಿಯಾ ದೇಶದ ರಾಜಧಾನಿ ಬೆಲ್‌ಗ್ರೇಡ್‌ನಲ್ಲಿ 26 ದಿನಗಳ ಕಾಲ ಚಿತ್ರೀಕರಿಸಲಾಯಿತು. ಕೆಲ ಮೂಲಗಳ ಪ್ರಕಾರ ಮಲೇಷಿಯಾ, ಥೈಲ್ಯಾಂಡ್ ನಲ್ಲಿಯೂ ಚಿತ್ರದ ಕೆಲ ಭಾಗಗಳನ್ನು ಚಿತ್ರೀಕರಿಸಲಾಗಿದೆ.