X
ಕನ್ನಡ » ಚಲಚಿತ್ರಗಳು » ಕೋಟಿಗೊಬ್ಬ 3
ಕೋಟಿಗೊಬ್ಬ 3

ಕೋಟಿಗೊಬ್ಬ 3

Action | 15 Oct 2021 | U/A | 140 Mins
Kannada

2.5 /5 Users

3.5 /5 Filmibeat

ಕೋಟಿಗೊಬ್ಬ 3 ಕಥೆ

2016 ರ ಸೂಪರ್ ಹಿಟ್ ಚಿತ್ರ `ಕೋಟಿಗೊಬ್ಬ 2' ನಂತರ ಕಿಚ್ಚ ಸುದೀಪ್ ಮತ್ತು ನಿರ್ಮಾಪಕ ಸೂರಪ್ಪ ಬಾಬು ಕಾಂಬಿನೇಷನ್ ನ ಈ ಚಿತ್ರವನ್ನು ಶಿವ ಕಾರ್ತಿಕ್ ನಿರ್ದೇಶನ ಮಾಡಿದ್ದಾರೆ.ಈ ಚಿತ್ರದ ಕಥೆಯನ್ನು ಸ್ವತಃ ಸುದೀಪ್ ಅವರೇ ಬರೆದಿದ್ದಾರೆ. ಜನೇವರಿ 20, 2020 ರಂದು ಚಿತ್ರದ ಶೂಟಿಂಗ್ ಮುಕ್ತಾಯವಾಯಿತು. ಆಶಿಕಾ ರಂಗನಾಥ್ ಚಿತ್ರದ ಒಂದು ಹಾಡಿಗೆ ಹೆಜ್ಜೆ ಹಾಕಿದ್ದಾರೆ.  ಕಥೆ : ತನ್ನ ಆಶ್ರಮದ ಹುಡುಗಿಗೆ ಅಪರೂಪದ ಕಾಯಿಲೆ ಎದುರಾದಾಗ, ಅದರ ಚಿಕಿತ್ಸೆಗಾಗಿ ಪೋಲೆಂಡಿಗೆ ಹೋಗುವ ನಾಯಕನಿಗೆ ನಾಯಕಿಯ ಪರಿಚಯವಾಗುತ್ತದೆ. ಎಲ್ಲಾ ಚಿತ್ರದಂತೆ, ಇಲ್ಲೂ ಪರಿಚಯ ಪ್ರೇಮಕ್ಕೆ ತಿರುಗುತ್ತದೆ. ಪೋಲೆಂಡ್ ನಲ್ಲಿ ನಡೆಯುವ ಸಾಲುಸಾಲು ಬಾಂಬ್ ಬ್ಲ್ಯಾಸ್ಟ್, ಕೋಟ್ಯಾಂತರ ರೂಪಾಯಿ ಬೆಲೆಬಾಳುವ ಆಭರಣಗಳ ಕಳ್ಳತನದ ಹಿಂದೆ ಘೋಸ್ಟ್ ಪಾತ್ರವಿದೆ ಎಂದು ಇಂಟರ್ ಪೋಲ್ ಪೊಲೀಸರು ಮತ್ತು ವಿಲನ್, ಅವನನ್ನೇ ಹೋಲುವ ಸತ್ಯನ ಹಿಂದೆ ಬೀಳುತ್ತಾರೆ, ಸತ್ಯ ಜೈಲು ಪಾಲಾಗುತ್ತಾನೆ. ಅಲ್ಲಿ, ಎಸಿಪಿ ಕಿಶೋರ್ (ರವಿಶಂಕರ್) ಅವರ ಪರಿಚಯವಾಗುತ್ತದೆ. ಅಲ್ಲಿಂದ ಇಬ್ಬರೂ ಜೈಲಿನಿಂದ ತಪ್ಪಿಸಿಳ್ಳುತ್ತಾರೆ. ಸತ್ಯ-ಶಿವ-ಘೋಸ್ಟ್ ಪಾತ್ರಗಳು ಎಲ್ಲವೂ ಒಂದೇನಾ, ನಾಯಕ ಯಾವ ಕಾರಣಕ್ಕಾಗಿ ವಿಲನ್ ಮೇಲೆ ನಾಯಕ ಪ್ರತೀಕಾರ ತೆಗೆದುಕೊಳ್ಳುತ್ತಾನೆ ಎನ್ನುವುದು ಚಿತ್ರದ ಕಥೆ. ಚಿತ್ರದಲ್ಲಿ ನಾಯಕಿಯಾಗಿ `ಪ್ರೇಮಂ' ಖ್ಯಾತಿ ಮಡೋನಾ ಸೆಬಾಸ್ಟಿಯನ್ ನಾಯಕಿಯಾಗಿ ನಟಿಸಿದರೆ. ಬಾಲಿವುಡ್ ನಟ ಅಪ್ತಭ್ ಶಿವದಾಸಾನಿ, ನವಾಜ ಶಾ, ಪಿ.ರವಿಶಂಕರ್ ಖಳನಾಯಕರಾಗಿ ಕಾಣಿಸಿಕೊಂಡಿದ್ದಾರೆ, ತೆಲಗು ನಟಿ ಶ್ರದ್ಧಾ ದಾಸ್ ಪೋಲಿಸ್ ಪಾತ್ರದಲ್ಲಿ ನಟಿಸಿದ್ದಾರೆ. ಚಿತ್ರವಿಶೇಷತೆಗಳು 1.ಚಿತ್ರದ ಮೊದಲ ಟೀಸರ್‌ನ್ನು 2018,ಸೆಪ್ಟಂಬರ್ 2 ರಂದು ಸುದೀಪ್ ಜನ್ಮದಿನ ಪ್ರಯುಕ್ತ ಬಿಡುಗಡೆ ಮಾಡಲಾಯಿತು. ಟೀಸರ್ ಮೂರು ದಿನ ಟ್ರೆಂಡಿಂಗ್‌ನಲ್ಲಿತ್ತು. 2.ಚಿತ್ರದ ಕೆಲವು ಬಹುಮುಖ್ಯ ಭಾಗಗಳನ್ನು ಸರ್ಬಿಯಾ ದೇಶದ ರಾಜಧಾನಿ ಬೆಲ್‌ಗ್ರೇಡ್‌ನಲ್ಲಿ 26 ದಿನಗಳ ಕಾಲ ಚಿತ್ರೀಕರಿಸಲಾಯಿತು. ಕೆಲ ಮೂಲಗಳ ಪ್ರಕಾರ ಮಲೇಷಿಯಾ, ಥೈಲ್ಯಾಂಡ್ ನಲ್ಲಿಯೂ ಚಿತ್ರದ ಕೆಲ ಭಾಗಗಳನ್ನು ಚಿತ್ರೀಕರಿಸಲಾಗಿದೆ.
Read More

ಕೋಟಿಗೊಬ್ಬ 3 ಕಲಾವಿದರು ಮತ್ತು ಸಿಬ್ಬಂದಿ

ಕೋಟಿಗೊಬ್ಬ 3 ಕ್ರೂ ಮಾಹಿತಿ

ನಿರ್ದೇಶಕ ಶಿವ ಕಾರ್ತಿಕ್
ಕಥೆ ಸುದೀಪ್
ಸಿನಿಮಾಟೋಗ್ರಫಿ ಶೇಖರ್ ಚಂದ್ರ
ಸಂಪಾದಕ ಪ್ರವೀಣ್ ಆ್ಯಂಟನಿ
ಸಂಗೀತ ಅರ್ಜುನ್ ಜನ್ಯ
ನಿರ್ಮಾಪಕ ಸೂರಪ್ಪ ಬಾಬು
ಬಜೆಟ್ TBA
ಬಾಕ್ಸ್ ಆಫೀಸ್ TBA
ಒಟಿಟಿ ಪ್ಲಾಟ್ ಫಾರ್ಮ್ TBA
ಒಟಿಟಿ ರಿಲೀಸ್ ದಿನಾಂಕ TBA

ಕೋಟಿಗೊಬ್ಬ 3 ವಿಮರ್ಶಕರ ವಿಮರ್ಶೆ

ವಿಜಯವಾಣಿ
ಒಂದು ಲೆವೆಲ್ ಮೇಲೆಯೇ ನಿಲ್ಲುವ `ಕೋಟಿಗೊಬ್ಬ 3' ಚಿತ್ರಕ್ಕೆ ಒಂದಿಷ್ಟು ವೇಗದ ನಿರೂಪಣೆಯೂ ಸಿಕ್ಕಿಬಿಟ್ಟಿದ್ದರೆ ಮಜ ದುಪ್ಪಟ್ಟಾಗಿರುತ್ತಿತ್ತು.
ಸುವರ್ಣ ನ್ಯೂಸ್
ಜಾಸ್ತಿ ಲಾಜಿಕ್‌ ಹುಡುಕದೆ ಶಿಳ್ಳೆ, ಚಪ್ಪಾಳೆಗಳ ಜೊತೆ ಸಿನಿಮಾ ಆಸ್ವಾದಿಸಿ ನಗುತ್ತಾ ಹೊರಬರುವಂತೆ ಮಾಡಬೇಕು ಎಂಬ ಉದ್ದೇಶಕ್ಕೆ ನಿರ್ದೇಶಕ ಶಿವಕಾರ್ತಿಕ್‌ ಪೂರ್ತಿ ಬದ್ಧರಾಗಿದ್ದಾರೆ.
ಉದಯವಾಣಿ
ಸತ್ಯ ಶೋಧನೆಯಲ್ಲಿ ದೊರೆತ ಶಿವ ಸಾಂಗತ್ಯ
ವಿಜಯ ಕರ್ನಾಟಕ
ಲಾಜಿಕ್‌ಗಳಿಗೆ ಮೂಟೆ ಕಟ್ಟಿ 'ಮ್ಯಾಜಿಕ್' ಮಾಡುವ ಸತ್ಯ & ಶಿವ!
ಕನ್ನಡ ಫಿಲ್ಮಿಬೀಟ್
ಚಿತ್ರದಲ್ಲಿ ಕೆಲವೊಂದು ನ್ಯೂನ್ಯತೆಗಳಿವೆ. ಆದರೆ, ಸಿನಿಮಾದ ವೇಗ, ಸುದೀಪ್ ಸೇರಿದಂತೆ ನಟರ ಪರ್ಫಾರ್ಮೆನ್ಸ್ ಇದನ್ನೆಲ್ಲಾ ಮರೆಯುವಂತೆ ಮಾಡುತ್ತದೆ. ಒಟ್ಟಿನಲ್ಲಿ, ಯಾವುದೇ ಲಾಜಿಕ್ ನೋಡದೇ, ಮನೋರಂಜನೆಯಿಂದ ಕೂಡಿದ ಪಕ್ಕಾ ಫ್ಯಾಮಿಲಿ ಸಿನಿಮಾ ಇದು.

ಕೋಟಿಗೊಬ್ಬ 3 ಟ್ರೇಲರ್

Video Thumbnail

ಕೋಟಿಗೊಬ್ಬ 3 ಪಾಟ್ಲುಗಳು

ಕೋಟಿಗೊಬ್ಬ 3 ಸಿನಿಮಾ ನೋಡುಗರ ವಿಮರ್ಶೆ

  • ಕಥೆ
  • ಕ್ರಿಯೆ
  • ದಿಕ್ಕು
  • ಚಿತ್ರ ರೇಟಿಂಗ್

×
2.5 /5 Your Rating

ಕೋಟಿಗೊಬ್ಬ 3

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+